ಉತ್ತರ ಪ್ರದೇಶ: ಉತ್ತರ ಪ್ರದೇಶದ ಬುಲಂದ್ಶಹರ್ನ ರಾಷ್ಟ್ರೀಯ ಹೆದ್ದಾರಿ 34 ರಲ್ಲಿ ಭಕ್ತರಿಂದ ತುಂಬಿದ್ದ ಟ್ರ್ಯಾಕ್ಟರ್ಗೆ ಕಂಟೇನರ್ ಡಿಕ್ಕಿ ಹೊಡೆದ ಪರಿಣಾಮ 8 ಜನರು ಸಾವನ್ನಪ್ಪಿದ್ದಾರೆ, ಇತರ 45 ಜನರು ಗಾಯಗೊಂಡಿದ್ದಾರೆ.
ಉತ್ತರ ಪ್ರದೇಶದ ಕಾಸ್ಗಂಜ್ನಿಂದ ರಾಜಸ್ಥಾನದ ಗೋಗಮೇಡಿಗೆ ಗೋಗಾಜಿಯ ಭಕ್ತರು ಹೋಗುತ್ತಿದ್ದಾಗ ಘಾಟಲ್ ಗ್ರಾಮದ ಬಳಿ ಈ ಘಟನೆ ನಡೆದಿದೆ.
ಘಟನೆ ಮಾಹಿತಿ ಬಂದ ಕೂಡಲೇ ಪೊಲೀಸ್ ತಂಡಗಳು ಅಪಘಾತ ಸ್ಥಳಕ್ಕೆ ಧಾವಿಸಿದವು. ಗಾಯಾಳುಗಳನ್ನು ಖುರ್ಜಾದ ಕೈಲಾಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದ್ದು, ಅವರಿಗೆ ವೆಂಟಿಲೇಟರ್ ಸಹಾಯ ಒದಗಿಸಲಾಗಿದೆ. ಅಪಘಾತದಲ್ಲಿ ಭಾಗಿಯಾದ ಕಂಟೇನರ್ ಅನ್ನು ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಪಘಾತಕ್ಕೆ ಕಾರಣವಾದ ಟ್ರಕ್ ಪೊಲೀಸ್ ಕಸ್ಟಡಿಯಲ್ಲಿದೆ ಎಂದು ಬುಲಂದ್ಶಹರ್ ಎಸ್ಎಸ್ಪಿ ದಿನೇಶ್ ಕುಮಾರ್ ಸಿಂಗ್ ಹೇಳಿದ್ದಾರೆ.