ಬೆಂಗಳೂರು : ಇಂದಿರಾನಗರದ ಸರ್ವಿಸ್ ಅಪಾರ್ಟ್ಮೆಂಟ್ ನಲ್ಲಿ ಕೊಲೆಯಾಗಿದ್ದ ಮಾಯ ಗೊಗಯ್ ಪ್ರಕರಣ ಎಲ್ರಿಗೂ ಗೊತ್ತಿದೆ. ಆದ್ರೆ ಕೊಲೆ ನಡೆದ ಕಾರಣ ಕೇಳಿದ್ರೆ ಒಂದು ಕ್ಷಣ ಶಾಕ್ ಆಗೋದು ಪಕ್ಕಾ..!
ಕಳೆದ ತಿಂಗಳು 26ರಂದು ಮಾಯಾ ಗೋಗಯ್ ನ ತನ್ನ ಪ್ರಿಯಕರ ಆರವ್ ಹನೋಯ್ ಕೊಲೆ ಮಾಡಿ ಎಸ್ಕೆಪ್ ಆಗಿದ್ದ. 24ರಮಧ್ಯಾಹ್ನ ಕೊಲೆ ಮಾಡಿದ್ದ ಆರವ್ ಎರಡು ದಿನ ಶವದೊಂದಿಗೆ ಕಾಲ ಕಳೆದಿದ್ದಾನೆ. ತಂದೆ ತಾಯಿ ಪ್ರೀತಿ ಸಿಗದೆ ತಾತನ ಜೊತೆಗೆ ಬೆಳೆದ ಆರವ್ ಮಾಯಳನ್ನ ತುಂಬಾ ಪ್ರೀತಿ ಮಾಡ್ತಿದ್ನಂತೆ.
ಆದ್ರೆ ಮಾಯ ಆರವ್ ಕೊಡ್ತಿದ್ದಷ್ಟು ಪ್ರೀತಿಯನ್ನ ಕೊಡ್ತಿರ್ಲಿಲ್ವಂತೆ. ಮಾಯ ಸದಾ ಫ್ರೆಂಡ್ ಜೊತೆಗೆ ಪೋನ್ ನಲ್ಲಿ ಬ್ಯುಸಿಯಾಗಿ ಇರ್ತಿದ್ಳಂತೆ. ಆರವ್ ಜೊತೆಗಿದ್ರು ಫ್ರೆಂಡ್ಸ್ ಜೊತೆಗೆ ಮಾತಾಡ್ತಾ ಬ್ಯುಸಿಯಾಗಿ ಇರ್ತಿದ್ಳಂತೆ. ಇದ್ರಿಂದ ಆರವ್ ಸಾಕಷ್ಟು ಡಿಸ್ಟರ್ಬ್ ಆಗಿದ್ನಂತೆ. ತಾನು ಇಲ್ಲಿದ್ರೆ ಇವಳು ಪ್ರೀತಿ ಕೊಡಲ್ಲ ಸತ್ತು ಸ್ವರ್ಗಕ್ಕೆ ಹೋದ್ರೆ ಯಾರು ಡಿಸ್ಟರ್ಬ್ ಮಾಡಲ್ಲ ಅಂತ ಮಾಯಳನ್ನ ಸಾಯಿಸಿ ತಾನು ಸಾಯೋ ತೀರ್ಮಾನ ಮಾಡಿದ್ನಂತೆ.
ಅದ್ರಂತೆ ಪ್ಲಾನ್ ಮಾಡಿ ಇಂದಿರಾನಗರದ ಲಾಡ್ಜ್ ಗೆ ಮಾಯಳ ಜೊತೆಗೆ ಬಂದಿದ್ದಾನೆ. ಜೆಪ್ಟೋದಲ್ಲಿ ಚಾಕು, ವೈಯರ್ ಆರ್ಡರ್ ಮಾಡಿ ಮೊದಲಿಗೆ ಮಾಯಳ ಕುತ್ತಿಗೆ ಹಿಸುಕಿ ಎದೆಗೆ ಚಾಕು ಇರಿದು ಕೊಂದಿದ್ದ, ನಂತರ ತಾನು ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದು ಸಾಧ್ಯವಾಗದಿದ್ದಾಗ ಮತ್ತೆ ಜೆಪ್ಟೊದಲ್ಲಿ ಹಗ್ಗ ಬುಕ್ ಮಾಡಿ ತರಿಸಿದ್ದ. ಹಗ್ಗದಿಂದ ನೇಣುಹಾಕಿಕೊಳ್ಳಲು ವಿಫಲ ಯತ್ನ ನಡೆಸಿದ್ದಾನೆ. ಹೀಗೆ ಎರಡು ದಿನ ಶವದ ಜೊತೆಗಿದ್ದು 26 ರ ಬೆಳಿಗ್ಗೆ ಲಾಡ್ಜ್ ನಿಂದ ಎಸ್ಕೇಪ್ ಆಗಿದ್ದ. ಒಟ್ಟಿನಲ್ಲಿ ಸೈಕೋ ಮನಸ್ಥಿತಿಯಿಂದ ಒಂದು ಜೀವ ಬಲಿಯಾದ್ರೆ ಆತನು ಜೈಲು ಸೇರಿದ್ದಾನೆ.