ಓದುಗ ಪ್ರಭುಗಳಲ್ಲಿ ಒಂದು ಮನವಿ
“ಬಿಸಿ ಸುದ್ದಿ” bcsuddi.com ಪ್ರಾರಂಭವಾಗಿ ಒಂದು ದಶಕ ಪೂರೈಸುತ್ತಿರುವ ಸಂದರ್ಭದಲ್ಲಿ ಹಲವಾರು ಗೆಳೆಯರನ್ನು ನೆನಸಿಕೊಳ್ಳುವುದು ಹಾಗೂ ನಮ್ಮ ಜೊತೆ ಕೆಲ ಕಂಪನಿಗಳು ಒಡಂಬಡಿಕೆ ಮಾಡಿಕೊಂಡಿರುವುದನ್ನು ಮರೆಯಲು ಸಾಧ್ಯವಿಲ್ಲ.
ಅದರಲ್ಲಿ ಹೆಚ್ಚಿನ ಪಾಲು GNI ಮತ್ತು ಮೀಡಿಯಾಲಜಿ ಸಾಫ್ಟ್‌ವೇರ್‌ಗೆ ಧನ್ಯವಾದಗಳನ್ನು ಈ ಸಂದರ್ಭದಲ್ಲಿ ಹೇಳಲೇ ಬೇಕು.! ಒಂದು ವೆಬ್ ಸೈಟನ್ನು ಹೇಗೆ ನಿಭಾಯಿಸಬೇಕು. ಯಾವತರಹದ ಸುದ್ದಿಗಳನ್ನು ಪ್ರಕಟಿಸಬೇಕು. ಆರ್ಥಿಕವಾಗಿ ಮುಂದೆ ಬರಬೇಕಾದರೆ ಯಾವರೀತಿಯ ಟೂಲ್ Tool ಗಳನ್ನು ಬಳಸಿದರೆ ಉತ್ತಮ ಎಂಬ ವಿಷಯಗಳನ್ನು GNI ಮತ್ತು ಮೀಡಿಯಾಲಜಿ ಸಾಫ್ಟ್‌ವೇರ್ ಹೇಳಿ ಕೊಟ್ ಟೂಲ್ ಗಳನ್ನು ಬಳಸಿಕೊಂಡು ತಜ್ಞರಿಂದ ಕ್ಲಾಸ್ ನೀಡಿದ್ದು ಬಿಸಿ ಸುದ್ದಿ ಬೆಳವಣಿಗಗೆ ಪೂರಕವಾಯಿತು.!
GNI ಅಂದರೆ ಗೂಗಲ್ ನ್ಯೂಸ್ ಇನಿಶಿಯೇಟಿವ್ ಪ್ರಪಂಚದಾದ್ಯಂತದ ಸುದ್ದಿ ಸಂಸ್ಥೆಗಳಿಗೆ ಡಿಜಿಟಲ್ ತಂತ್ರಗಳ ಕುರಿತು ಅರಿವು ಮೂಡಿಸುವ ಒಂದು ಉಪಯುಕ್ತ ಕಾರ್ಯಕ್ರಮದಲ್ಲಿ ಬಿಸಿ ಸುದ್ದಿ. ಕಾಂ ಆಯ್ಕೆಗೊಂಡಿತ್ತು. ಇದರಿಂದ GNI ಮಾಧ್ಯಮ ಸಂಸ್ಥೆಗಳಿಗೆ ತಮ್ಮ ವ್ಯಾಪಾರ ಮಾದರಿಗಳನ್ನು ಬಲಪಡಿಸಲು ತಾಂತ್ರಿಕ ಪರಿಕರಗಳು, ತರಬೇತಿ ಮತ್ತು ಇತರ ಸಂಪನ್ಮೂಲಗಳನ್ನು ಒದಗಿಸುವ ಗುರಿ.
ಜೊತೆಗೆ ಮೀಡಿಯಾಲಜಿ ಸಾಫ್ಟ್‌ವೇರ್ ಅತ್ಯಾಧುನಿಕ ಡೇಟಾ ಅನಾಲಿಟಿಕ್ಸ್ ಮತ್ತು ವಿಷಯ ನಿರ್ವಹಣಾ ವ್ಯವಸ್ಥೆಯಾಗಿದ್ದು ಈ ಸಂಸ್ಥೆ ಮಾಧ್ಯಮ ಕಂಪನಿಗಳು ತಮ್ಮ ವಿಷಯ ವಿತರಣಾ ತಂತ್ರಗಳನ್ನು ಅತ್ಯುತ್ತಮವಾಗಿಸಲು ಸಹಾಯ ಮಾಡಿರುವುದರಿಂದ ಬಿಸಿ ಸುದ್ದಿ ಬೆಳೆಯಲು ಬಹಳಷ್ಟು ಪರಿಣಾಮಕಾರಿ ಆಯಿತು.
GNI ಮತ್ತು ಮೀಡಿಯಾಲಜಿ ಸಾಫ್ಟ್‌ವೇರ್ ಹೇಳಿ ಕೊಟ್ ಟೂಲ್ ಗಳನ್ನು ಬಳಸಿಕೊಂಡು ರಚನಾತ್ಮಕ ಡೇಟಾ ಸುಧಾರಣೆಗಳು, ಜಾಹೀರಾತು ಆಪ್ಟಿಮೈಸೇಶನ್ ಮತ್ತು ಪ್ರೇಕ್ಷಕರ ನಿಶ್ಚಿತಾರ್ಥದ ತಂತ್ರಗಳ ಮೂಲಕ ಅವರು ನಮಗೆ ಮಾರ್ಗದರ್ಶನ ನೀಡಿರುವುದರಿಂದ, ಇನ್ನೂ ಉತ್ತಮವಾದ ಕಾರ್ಯಕ್ರಮವನ್ನು ರೂಪಿಸುವಲ್ಲಿ ಬಿಸಿ ಸುದ್ದಿ ಬಳಗ ಮುಂದಾಗಿದೆ. ಹಾಗಾಗಿ ಹೆಚ್ಚು ಪ್ರೇಕ್ಷಕರಿಗೆ ತಲುಪುವುದು ಹಿಂದೆಂದಿಗಿಂತಲೂ ವಿಶಾಲವಾಗಿರುವುದು ಹೆಮ್ಮೆಯ ಸಂಗತಿ. ಮತ್ತು ಅವರ ಪಾಲುದಾರಿಕೆಗಾಗಿ GNI ಮತ್ತು ಮೀಡಿಯಾಲಜಿ ಸಾಫ್ಟ್‌ವೇರ್‌ಗೆ bcsuddi.com ನಿಂದ ಧನ್ಯವಾದಗಳು ಈ ಸಂದರ್ಭದಲ್ಲಿ ಹೇಳಲೇ ಬೇಕು.
-ಸಂ