ಬೆಂಗಳೂರು : ನಂದಿನಿ ಮೊಸರು, ತುಪ್ಪ, ಬೆಣ್ಣೆ ಮತ್ತು ಲಸ್ಸಿ ಸೇರಿದಂತೆ ಹಲವು ಉತ್ಪನ್ನಗಳ ದರ ಇಳಿಕೆಯಾಗಿದ್ದು, ಇಂದಿನಿಂದ ಹೊಸ ದರ ಜಾರಿಗೆ ಬರಲಿದೆ.
ಬೆಣ್ಣೆ, ತುಪ್ಪ, ಚೀಸ್ ಮೇಲೆ ಮೊದಲು 12% ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಆದರೆ ಈ ತೆರಿಗೆಯನ್ನು 5%ಕ್ಕೆ ಇಳಿಸಿದ್ದರಿಂದ ಈ ಉತ್ಪನ್ನಗಳ ಬೆಲೆ ಇಳಿಕೆಯಾಗಿದೆ. ಜಿಎಸ್ಟಿ ಪರಿಷ್ಕರಣೆಯಾದ ಬೆನ್ನಲ್ಲೇ ನಂದಿನಿಯ ಕೆಲ ಉತ್ಪನ್ನಗಳ ದರ ಇಳಿಕೆ ಮಾಡುವ ಮೂಲಕ ಕೆಎಂಎಫ್ ಗ್ರಾಹಕರಿಗೆ ಗುಡ್ ನ್ಯೂಸ್ ನೀಡಿದೆ.
ಪನ್ನಿರ್ ಮತ್ತು ಯುಹೆಚ್ಟಿ ಹಾಲಿಗೆ(ಗುಡ್ ಲೈಫ್) ಮೊದಲು 5% ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು. ಆದರೆ ಈಗ ಈ ಉತ್ಪನ್ನಗಳ ಮೇಲೆ ಶೂನ್ಯ ತೆರಿಗೆ ಹಾಕಲಾಗುತ್ತದೆ. ಹೀಗಾಗಿ ಈ ವಸ್ತುಗಳ ದರ ಕಡಿಮೆಯಾಗಿದೆ. ಇನ್ನು ಹಾಲು, ಮೊಸರು ಬೆಲೆಯಲ್ಲಿ ಯಾವುದೇ ಬದಲಾವಣೆ ಇಲ್ಲ. ಹಾಲಿಗೆ ಜಿಎಸ್ಟಿ ಇಲ್ಲ, ಮೊಸರಿಗೆ 5% ರಷ್ಟು ಜಿಎಸ್ಟಿ ವಿಧಿಸಲಾಗುತ್ತಿದೆ. ಹೀಗಾಗಿ ಈ ಎರಡೂ ಉತ್ಪನ್ನಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ತುಪ್ಪ, ಬೆಣ್ಣೆ, ಪನ್ನೀರ್, ಗುಡ್ ಲೈಫ್ ಹಾಲು, ಸಂಸ್ಕರಿಸಿದ ಚೀಸ್, ಫ್ಯಾಮಿಲಿ ಪ್ಯಾಕ್ ಐಸ್ಕ್ರೀಮ್, ಐಸ್ಕ್ರೀಮ್ ವೆನಿಲಾ ಟಬ್, ಐಸ್ಕ್ರೀಮ್ ಚಾಕಲೇಟ್ ಸಂಡೇ, ಐಸ್ಕ್ರೀಮ್ ಮ್ಯಾಂಗೋ ನ್ಯಾಚುರಲ್ಸ್, ಖಾರಾ ಉತ್ಪನ್ನಗಳು, ಮಫಿನ್ಗಳು, ನಂದಿನಿ ನೀರು, ಜಾಮೂನು ಮಿಶ್ರಣ, ಬಾದಾಮ್ ಹಾಲಿನ ಪುಡಿ, ಕುಕೀಸ್, ರೈಸ್ ಕ್ರಿಪಿ ಮಿಲ್ಕ್ ಚಾಕೋ, ಕೇಕ್ನಂತಹ ಉತ್ಪನ್ನಗಳ ದರ ಇಂದಿನಿಂದ ಇಳಿಕೆಯಾಗಲಿದೆ.