ಧಾರವಾಡ:ಹೌದು ತಾಳೆ ಗರಿಯಲ್ಲಿನ ಜ್ಞಾನಸಂಪತ್ತನ್ನು ಡಿಜಿಟಲೀಕರಣಗೊಳಿಸುವ ಕೆಲಸವೊಂದು ಸದ್ದಿಲ್ಲದೇ ನಡೆಯುತ್ತಿದೆ.
ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಈ ಬಗ್ಗೆ ದೊಡ್ಡ ಅಭಿಯಾನವೇ ನಡೆಯುತ್ತಿದೆ. ಬಟ್ಟೆಯಲ್ಲಿ ಕಟ್ಟಿರುವ ಒಂದೊಂದೇ ಕಟ್ಟುಗಳನ್ನು ತುಂಬಾ ನಾಜೂಕಿನಿಂದ ಬಿಡಿಸಿ ಹೊರತೆಗೆಯುತ್ತಿರುವ ಸಿಬ್ಬಂದಿ, ಅದನ್ನು ಸ್ವಚ್ಛಗೊಳಿಸುತ್ತಿರೋ ಸೇವಾ ಕಾರ್ಯಕರ್ತರು.
ಇನ್ನೊಂದೆಡೆ ಆ ಗರಿಗಳನ್ನು ಸ್ಕ್ಯಾನ್ ಮಾಡಿ ಸೇವ್ ಮಾಡಿಟ್ಟುಕೊಳ್ಳುತ್ತಿರುವ ಕೆಲಸ ಧಾರವಾಡದ ವಿಶ್ವವಿದ್ಯಾಲಯದಲ್ಲಿ ಕಂಡುಬಂದಿದೆ.