ಕೊಚ್ಚಿ: ಮಲಯಾಳಂ ಖ್ಯಾತ ನಟ ಮುಮ್ಮಟ್ಟಿಗೆ ಸೇರಿ ಕೊಚ್ಚಿ ಮತ್ತು ಚೆನ್ನೈನಲ್ಲಿರುವ ಮನೆಗಳು ಸೇರಿದಂತೆ 17 ಸ್ಥಳಗಳ ಮೇಲೆ ಇಡಿ ದಾಳಿ ನಡೆಸಿದೆ.
ಭೂತಾನ್ ವಾಹನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಚ್ಚಿ ಮತ್ತು ಚೆನ್ನೈನಲ್ಲಿರುವ ಮಮ್ಮುಟ್ಟಿ ಮತ್ತು ದುಲ್ಕರ್ ಸಲ್ಮಾನ್ ಅವರ ಮನೆಗಳು ಸೇರಿದಂತೆ 17 ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ ನಡೆಸಿದೆ. ಈ ದಾಳಿಗಳು ದುಲ್ಕರ್ ಅವರ ವಾಹನಗಳಿಗೆ ಸಂಬಂಧಿಸಿವೆ ಎಂದು ಹೇಳಲಾಗುತ್ತಿದೆ. ಭೂತಾನ್ನಿಂದ ಭಾರತಕ್ಕೆ ಆಗಮಿಸಿದ ವಾಹನಗಳನ್ನು ಪತ್ತೆಹಚ್ಚಲು ಕಸ್ಟಮ್ಸ್ ನಡೆಸಿದ ಆಪರೇಷನ್ ನಮ್ಖೋರ್ ನಂತರ ಇಡಿ ಈಗ ದಾಳಿಗೆ ಬಂದಿದೆ. ಕೊಚ್ಚಿಯಲ್ಲಿರುವ ದುಲ್ಕರ್ ಅವರ ಎರಡು ಮನೆಗಳು ಮತ್ತು ಚೆನ್ನೈನಲ್ಲಿರುವ ಒಂದು ಮನೆಗಳ ಮೇಲೆ ದಾಳಿ ನಡೆಸಲಾಯಿತು. ಅಧಿಕಾರಿಗಳು ನಟ ಅಮಿತ್ ಚಕ್ಕಲಕ್ಕಲ್ ಅವರ ಮನೆಗೂ ತಲುಪಿದ್ದಾರೆ ಎಂದು ತಿಳಿದುಬಂದಿದೆ.