ಋಷಿಕೇಶದ ಲಕ್ಷ್ಮಣ್ ಝೂಲಾ ಬಳಿ ಇರುವ ಪವಿತ್ರ ಗಂಗಾ ನದಿಯಲ್ಲಿ ವಿದೇಶಿ ಮಹಿಳೆಯೊಬ್ಬರು ಬಿಕಿನಿ ಧರಿಸಿ ಸ್ನಾನ ಮಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋ ದಲ್ಲಿ ಮಹಿಳೆ ಬಿಕಿನಿ ಮತ್ತು ಹೂವಿನ ಹಾರವನ್ನು ಧರಿಸಿ ನದಿಯಲ್ಲಿ ಈಜುವುದನ್ನು ಕಾಣಬಹುದು. ಗಂಗಾ ನದಿಯಲ್ಲಿ ಬಿಕಿನಿ ಹಾಕಿಕೊಂಡು ಸಾನ್ನ ಮಾಡಿರುವುದು ಹಿಂದೂ ಸಂಪ್ರದಾಯಗಳಿಗೆ ಧಕ್ಕೆ ತಂದಿದೆ.
ಈ ರೀತಿಯ ವರ್ತನೆಗಳಿಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಧಾರ್ಮಿಕ ಹಾಗೂ ಪವಿತ್ರ ಸ್ಥಳಗಳಲ್ಲಿ ಈ ರೀತಿ ಮಾಡುವುದು ಸರಿಯಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವಿರೋಧ ವ್ಯಕ್ತವಾಗಿದೆ. ಗಂಗಾ ನದಿ ಜಗತ್ತಿನ ಬೇರೆ ಬೇರೆ ಜನರನ್ನು ಸೆಳೆಯುತ್ತಿದೆ, ಅದರಲ್ಲೂ ಭಾರತೀಯರಿಗೆ ಇದು ಪವಿತ್ರ ನದಿಯಾಗಿದೆ ಎಂದು ಹೇಳಿದ್ದಾರೆ.
ವಿದೇಶಿಗರು ತಮಗೆ ಒಪ್ಪಿಗೆ ಆಗುವ ಬಟ್ಟೆಗಳನ್ನು ಧರಿಸುವುದರಲ್ಲಿ ಯಾವ ಸಮಸ್ಯೆಗಳು ಇಲ್ಲ. ಆದರೆ ಧಾರ್ಮಿಕ ಕೇಂದ್ರಗಳಲ್ಲಿ ಕೆಲವೊಂದು ವಿಚಾರ–ಆಚಾರಗಳನ್ನು ಪಾಲಿಸಲೇಬೇಕು ಎಂದು ಸ್ಥಳೀಯರು ಹೇಳಿದ್ದಾರೆ.































