ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮನೆಯ ಕನಸು ಕಾಣುವವರಿಗೆ ಸಿಹಿ ಸುದ್ದಿ ನೀಡಿದೆ. 8 ಲಕ್ಷ ರೂ. ಗೃಹ ಸಾಲದ ಮೇಲೆ ಶೇಕಡಾ 4 ಬಡ್ಡಿ ಸಬ್ಸಿಡಿ ನೀಡಲಾಗುತ್ತಿದೆ.
ಹೌದು, ಮನೆ ಕಟ್ಟಬೇಕು ಅನ್ನೋ ಕನಸು ಎಲ್ಲರಿಗೂ ಇದ್ದೇ ಇರುತ್ತದೆ. ಇದನ್ನು ವಾಸ್ತವಗೊಳಿಸುವುದು ಅಷ್ಟು ಸುಲಭವಲ್ಲ.
ಆದರೆ ಕೇಂದ್ರ ಸರ್ಕಾರವು ಇದಕ್ಕೆ ಬೆಂಬಲ ನೀಡುತ್ತಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆ-ನಗರ (PMAY-U) 2.0 ಅಡಿಯಲ್ಲಿ ಸರ್ಕಾರ ಫಲಾನುಭವಿಗಳಿಗೆ ಗೃಹ ಸಾಲಗಳ ಮೇಲಿನ ಬಡ್ಡಿ ಸಬ್ಸಿಡಿಯನ್ನು ನೀಡುತ್ತಿದೆ.
ಬಡ್ಡಿ ಸಬ್ಸಿಡಿ ವಿವರಗಳು
ಈ ಯೋಜನೆಯಡಿ EWS/LIG ಮತ್ತು MIG ವರ್ಗದ ಫಲಾನುಭವಿಗಳಿಗೆ ರಿಯಾಯಿತಿಯ ಸೌಲಭ್ಯ ಲಭ್ಯ.
₹35 ಲಕ್ಷದವರೆಗಿನ ಮನೆಗೆ ₹25 ಲಕ್ಷದವರೆಗೆ ಗೃಹ ಸಾಲ ಪಡೆಯುವವರು ಈ ಸಬ್ಸಿಡಿಗೆ ಅರ್ಹರು
ಮೊದಲ 8 ಲಕ್ಷ ರೂ. ಸಾಲದ ಮೇಲೆ ಶೇಕಡಾ 4 ರಷ್ಟು ಬಡ್ಡಿ ಸಬ್ಸಿಡಿ ದೊರಕುತ್ತದೆ.
ಫಲಾನುಭವಿಗಳಿಗೆ ₹1.80 ಲಕ್ಷ ಸಬ್ಸಿಡಿ 5 ವಾರ್ಷಿಕ ಕಂತುಗಳಲ್ಲಿ ಬಿಡುಗಡೆ ಮಾಡಲಾಗುತ್ತದೆ.
ತಮ್ಮ ಖಾತೆಯ ವಿವರಗಳನ್ನು ವೆಬ್‌ಸೈಟ್, OTP ಅಥವಾ ಸ್ಮಾರ್ಟ್ ಕಾರ್ಡ್ ಮೂಲಕ ಪಡೆಯಬಹುದು.
ಅರ್ಹತೆ
ಆರ್ಥಿಕವಾಗಿ ದುರ್ಬಲ ವರ್ಗ (EWS), ಕಡಿಮೆ ಆದಾಯ ಗುಂಪು (LIG), ಮಧ್ಯಮ ಆದಾಯ ಗುಂಪು (MIG) ಸದಸ್ಯರು ಅರ್ಹರು.
ತಮ್ಮ ಹೆಸರಿನಲ್ಲಿ ಸ್ವಂತ ಮನೆ ಇಲ್ಲದವರು ಮಾತ್ರ ಅರ್ಜಿ ಸಲ್ಲಿಸಬಹುದು.
ವಾರ್ಷಿಕ ಆದಾಯದ ಆಧಾರದ ಮೇಲೆ:
- EWS: ₹3 ಲಕ್ಷದವರೆಗೆ
- LIG: ₹3 ಲಕ್ಷ – ₹6 ಲಕ್ಷ
- MIG: ₹6 ಲಕ್ಷ – ₹9 ಲಕ್ಷ
PMAY-U 2.0 ಪ್ರಮುಖ ಘಟಕಗಳು
ಫಲಾನುಭವಿ ಆಧಾರಿತ ನಿರ್ಮಾಣ (BLC)
ಪಾಲುದಾರಿಕೆಯಲ್ಲಿ ಕೈಗೆಟುಕುವ ವಸತಿ (AHP)
ಕೈಗೆಟುಕುವ ಬಾಡಿಗೆ ವಸತಿ (ARH)
ಬಡ್ಡಿ ಸಹಾಯಧನ ಯೋಜನೆ (ISS)
BLC, AHP, ARH ಘಟಕಗಳನ್ನು ಕೇಂದ್ರ ಪ್ರಾಯೋಜಿತ ಯೋಜನೆಯಂತೆ ಮತ್ತು ISS ಘಟಕವನ್ನು ಕೇಂದ್ರ ವಲಯ ಯೋಜನೆಯಂತೆ ಕಾರ್ಯಗತಗೊಳಿಸಲಾಗುತ್ತದೆ. ಅರ್ಹರು ತಮ್ಮ ಅಗತ್ಯ ಮತ್ತು ಆದ್ಯತೆ ಆಧಾರದ ಮೇಲೆ ಈ ಘಟಕಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು.