ವಾಸ್ತು ಶಾಸ್ತ್ರದ ಪ್ರಕಾರ ಅಡುಗೆ ಮನೆಯನ್ನು ಮನೆಯ ಪ್ರಮುಖ ಭಾಗವೆಂದು ಪರಿಗಣಿಸಲಾಗುತ್ತದೆ.
ಅಡುಗೆ ಮನೆಯಲ್ಲಿನ ವಾಸ್ತು ದೋಷಗಳು ಮನೆಯಲ್ಲಿ ರೋಗ ಮತ್ತು ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡುತ್ತದೆ.
ವಾಯುವ್ಯ ಅಥವಾ ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ ಇರಬೇಕು. ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡುವುದನ್ನು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ.
ಅಡುಗೆ ಮನೆಯಲ್ಲಿ ಸಿಂಕ್ ಅನ್ನು ಈಶಾನ್ಯ ಮೂಲೆಯಲ್ಲಿ ಇರಿಸಬೇಕು. ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ ಅಡುಗೆ ಮಾಡುವ ಸ್ಥಳ, ಓಲೆ ಸ್ವಚ್ಛವಾಗಿರಬೇಕು.