ಫಿಲಿಫೈನ್ಸ್ : ಬೆಳ್ಳಂಬೆಳಗ್ಗೆ ಫಿಲಿಫೈನ್ಸ್ ನಲ್ಲಿ 5.9 ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ.ಭೂಕಂಪದ ಬಲವಾದ ಕಂಪನಗಳೊಂದಿಗೆ ಭೂಮಿಯು ಮತ್ತೊಮ್ಮೆ ನಡುಗಿದೆ. ಇಂದು ಬೆಳಿಗ್ಗೆ ಫಿಲಿಪೈನ್ಸ್ನಲ್ಲಿ ಎರಡು ಬಾರಿ ಭೂಕಂಪ ಸಂಭವಿಸಿದೆ.ರಿಕ್ಟರ್ ಮಾಪಕದಲ್ಲಿ ಭೂಕಂಪಗಳ ತೀವ್ರತೆ 5.4 ಮತ್ತು 5.9 ಎಂದು ದಾಖಲಾಗಿದೆ. ಫಿಲಿಪೈನ್ಸ್ ಜ್ವಾಲಾಮುಖಿ ಮತ್ತು ಭೂಕಂಪಶಾಸ್ತ್ರ ಸಂಸ್ಥೆ (PHIVOLCS) ಭೂಕಂಪವನ್ನು ದೃಢಪಡಿಸಿದ್ದು, ಭೂಕಂಪದ ಕೇಂದ್ರ ಬಿಂದು ಸಮುದ್ರ ಮಟ್ಟದಿಂದ 10 ಕಿಲೋಮೀಟರ್ (6 ಮೈಲಿ) ಆಳದಲ್ಲಿ ಕಂಡುಬಂದಿದ್ದು, ಲೇಟ್ ಪ್ರಾಂತ್ಯದ ಸ್ಯಾನ್ ಫ್ರಾನ್ಸಿಸ್ಕೋ ಪಟ್ಟಣದ ಬಳಿ ಕೇಂದ್ರೀಕೃತವಾಗಿದೆ ಎಂದು ತಿಳಿಸಿದೆ.
