ಚೀನಾ : ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ಹೋದ 64 ವರ್ಷದ ವ್ಯಕ್ತಿಯ ಕರುಳಿನಿಂದ ವೈದ್ಯರು ಹಲ್ಲುಜ್ಜುವ ಬ್ರಷ್ ಹೊರತೆಗೆದಿದ್ದಾರೆ. 17 ಸೆಂ.ಮೀ. ಉದ್ದದ ಹಲ್ಲುಜ್ಜುವ ಬ್ರಷ್ 52 ವರ್ಷಗಳಿಂದ ಅವರ ದೇಹದಲ್ಲಿ ಸಿಲುಕಿಕೊಂಡಿತ್ತು ಎಂದು ತಿಳಿದುಬಂದಿದೆ.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ನ ವರದಿಯ ಪ್ರಕಾರ, ಯಾಂಗ್ ಎಂದು ಗುರುತಿಸಲ್ಪಟ್ಟ ಆ ವ್ಯಕ್ತಿ, 12 ನೇ ವಯಸ್ಸಿನಲ್ಲಿ ಹಲ್ಲುಜ್ಜುವ ಬ್ರಷ್ ನುಂಗಿದ್ದ ಎಂದು ಹೇಳಲಾಗಿದೆ. ಆದರೆ ಅದರ ಬಗ್ಗೆ ತನ್ನ ಹೆತ್ತವರಿಗೆ ಹೇಳಲು ತುಂಬಾ ಹೆದರಿದ್ದ.
ವೈದ್ಯರು ಯಾಂಗ್ ಮೇಲೆ ಎಂಡೋಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿ 80 ನಿಮಿಷಗಳಲ್ಲಿ ದೇಹದಿಂದ ಬ್ರಷ್ ಹೊರತೆಗೆದರು. ಕಳೆದ ಮೂರು ವರ್ಷಗಳಲ್ಲಿ ರೋಗಿಯ ಜೀರ್ಣಾಂಗ ವ್ಯವಸ್ಥೆಯಿಂದ ಒಂದು ವಸ್ತುವನ್ನು ತೆಗೆದುಹಾಕಲು ಆಸ್ಪತ್ರೆಯಲ್ಲಿ ತೆಗೆದುಕೊಂಡ ಅತಿ ಹೆಚ್ಚು ಸಮಯ ಇದು ಎಂದು ವೈದ್ಯರು ಹೇಳಿದ್ದಾರೆ.
ಯಾಂಗ್ ಅವರ ಯಶಸ್ವಿ ಚಿಕಿತ್ಸೆಯ ಸುದ್ದಿ ವೈರಲ್ ಆಗುತ್ತಿದ್ದಂತೆ, ಸಾಮಾಜಿಕ ಮಾಧ್ಯಮ ಬಳಕೆದಾರರು ಬ್ರಷ್ ಅವರ ದೇಹಕ್ಕೆ ಇಷ್ಟು ವರ್ಷಗಳಲ್ಲಿ ಯಾವುದೇ ಹಾನಿಯನ್ನುಂಟುಮಾಡದಿರುವುದು ದೇವರ ದಯೆ ಅವರು ಅದೃಷ್ಟಶಾಲಿ ಎಂದು ಕಾಮೆಂಟ್ ಮಾಡಿದ್ದಾರೆ.