ಆಸ್ಪತ್ರೆಯಲ್ಲಿ ಮಹಿಳಾ ಶೌಚಾಲಯಕ್ಕೆ ವ್ಯಕ್ತಿಯೊಬ್ಬ ನುಗ್ಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ಆತ ಮಹಿಳಾ ಶೌಚಾಲಯದೊಳಗೆ ಪ್ರವೇಶಿಸಿದ್ದ ಆತನನ್ನು ಹಿಡಿಯಲು ಹೋದ ವ್ಯಕ್ತಿಯ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ರೋಗಿಯೊಬ್ಬನ ಮೇಲೆ ಹಲ್ಲೆ ನಡೆಸಿದ್ದಾನೆ. ಅಪರಾಧಿ ಸದ್ದಾಂ ಹುಸೇನ್ ನ್ಯಾಯಾಲಯದಲ್ಲಿ ಶರಣಾd ಸ್ವಲ್ಪ ಹೊತ್ತಲ್ಲೇ ಘಟನೆ ನಡೆದಿದೆ. ಪೊಲೀಸರು ವೈದ್ಯಕೀಯ ತಪಾಸಣೆಗೆಂದು ಆಸ್ಪತ್ರೆಗೆ ಸದ್ದಾಂನನ್ನು ಕರೆತಂದಿದ್ದರು.
ಗುಂಡು ಹಾರಿಸಿದ ವ್ಯಕ್ತಿ ಹುಸೇನ್ನನ್ನು ಕೊಲ್ಲಲು ಆಸ್ಪತ್ರೆಗೆ ಬಂದಿರಬಹುದು ಎಂದು ಶಂಕಿಸಲಾಗಿದೆ. ಆಸ್ಪತ್ರೆಯ ಶೌಚಾಲಯದಲ್ಲಿ ಗುಂಡು ಹಾರಿಸಿದ ವ್ಯಕ್ತಿಯನ್ನು ಅರ್ಬಾಜ್ ಆಲಂ ಎಂದು ಗುರುತಿಸಲಾಗಿದೆ. ಆಲಂ ಶೌಚಾಲಯದ ಒಳಗೆ ಹೋಗುವ ಮೊದಲು ಹ್ಯಾಂಡ್ಗನ್ ಹಿಡಿದುಕೊಂಡು ಕಾರಿಡಾರ್ನಲ್ಲಿ ಬಹಿರಂಗವಾಗಿ ನಡೆದಿದ್ದ.
ಆಲಂ ತಪ್ಪಿಸಿಕೊಳ್ಳದಂತೆ ತನ್ನ ಕೋಲಿನಿಂದ ಆಲಂಗೆ ಹೊಡೆದಿದ್ದಾರೆ. ಅವರು ಆಲಂನನ್ನು ಬೆನ್ನಟ್ಟುತ್ತಿದ್ದಂತೆ ಹೇಗೋ ತಪ್ಪಿಸಿಕೊಂಡು ಆಸ್ಪತ್ರೆ ಹೊರಭಾಗಕ್ಕೆ ಬಂದಿದ್ದಾನೆ. ಆಗ ಹಲವು ಬಾರಿ ಗುಂಡಿನ ದಾಳಿ ನಡೆಸಿದ್ದಾನೆ.
ಅದು ತಪ್ಪಿ ಸ್ಥಳೀಯ ನಿವಾಸಿ ಅಲೋಕ್ ತಿವಾರಿ ಎಂಬ ರೋಗಿಗೆ ತಗುಲಿತು. ತಿವಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಸ್ಪತ್ರೆಯ ದ್ವಾರದಲ್ಲಿ ಇದ್ದ ಇತರ ಸಿಬ್ಬಂದಿ ಕೂಡ ಬೆನ್ನಟ್ಟಲು ಪ್ರಾರಂಭಿಸಿದರು ಮತ್ತು ಅವರು ಒಟ್ಟಾಗಿ ಆರೋಪಿಯನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಶೀಘ್ರದಲ್ಲೇ ಆಲಂನನ್ನು ಅವರಿಗೆ ಹಸ್ತಾಂತರಿಸಲಾಯಿತು ಎಂದು ಪೊಲೀಸರು ಹೇಳಿದರು; ಆತನಿಂದ ಎರಡು ಗುಂಡುಗಳು ಮತ್ತು ಒಂದು ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಅವರು ಕುಡಿದ ಮತ್ತಿನಲ್ಲಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.