ರಾತ್ರಿ ಪಾಳಿಯಲ್ಲಿ ತನ್ನ ಕೆಲಸದ ಹೊರೆ ಕಡಿಮೆ ಮಾಡಿಕೊಳ್ಳಲು ಪುರುಷ ನರ್ಸ್ ಓರ್ವ 10 ರೋಗಿಗಳನ್ನು ಕೊಲೆ ಮಾಡಿದಂತಹ ಘಟನೆ ಜರ್ಮನಿಯಲ್ಲಿ ನಡೆದಿದೆ.
ಸದ್ಯ ಆರೋಪಿಗೆ ನ್ಯಾಯಾಲಯ ಈಗ ಜೀವಾವಧಿ ಶಿಕ್ಷೆ ಘೋಷಿಸಿದೆ. ಬಿಬಿಸಿ ವರದಿಯ ಪ್ರಕಾರ ಈ ನರ್ಸ್ 10 ರೋಗಿಗಳನ್ನು ಕೊಲೆ ಮಾಡಿದ್ದು, ಇನ್ನುಳಿದ 27 ಜನರನ್ನು ಕೊಲೆ ಮಾಡುವುದಕ್ಕೆ ಯತ್ನಿಸಿದ್ದ.
ಈತ ರಾತ್ರಿ ಪಾಳಿ ಮಾಡುತ್ತಿದ್ದ ಸಮಯದಲ್ಲೆಲ್ಲಾ ಹೆಚ್ಚು ಹೆಚ್ಚು ರೋಗಿಗಳು ಸಾವನ್ನಪ್ಪುತ್ತಿರುವುದು ಹಾಗೂ ಅವರ ಆರೋಗ್ಯ ಇದ್ದಕ್ಕಿದ್ದಂತೆ ಕ್ಷೀಣಿಸುವುದು ಗಮನಕ್ಕೆ ಬಂದ ನಂತರ ಘಟನೆ ಬೆಳಕಿಗೆ ಬಂದಿದೆ ವೈದ್ಯರು ಹಾಗೂ ಇತರ ಆರೋಗ್ಯ ಸಿಬ್ಬಂದಿ ಅನುಮಾನ ವ್ಯಕ್ತಪಡಿಸಿದ ನಂತರ ಆತನನ್ನು ಬಂಧಿಸಲಾಗಿತ್ತು.
ಆರೋಪಿಯೂ 2023 ಹಾಗೂ 2024ರ ಅವಧಿಯಲ್ಲಿ ಈ ಕೃತ್ಯವೆಸಗಿದ್ದಾನೆ. ಜರ್ಮನಿಯ ವೂರ್ಸೆಲೆನ್‌ನಲ್ಲಿರುವ ಆಸ್ಪತ್ರೆಯಲ್ಲಿ ಈ ಭಯಾನಕ ಘಟನೆ ನಡೆದಿವೆ. ತೀವ್ರ ಕಾಳಜಿಯ ಅಗತ್ಯವಿದ್ದ ರೋಗಿಗಳಿಗೆ ನಿದ್ರಾಜನಕ ನೀಡಿದ ನರ್ಸ್ ಈ ಆಘಾತಕರಿ ಘಟನೆಯ ವಿಚಾರಣೆ ನಡೆಸಿದ ಜರ್ಮನಿಯ ಸ್ಥಳೀಯ ನ್ಯಾಯಾಲಯ ಮಾನವೀಯತೆ ಮರೆತ ಈ ನರ್ಸ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
44 ವರ್ಷದ ಪ್ರಾಯದ ಈ ನರ್ಸ್ ಹೆಚ್ಚಿನ ಸೇವೆಯ ಅಗತ್ಯ ಇದ್ದ ವೃದ್ಧರು ಮತ್ತು ಮಾರಕ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಅತಿಯಾದ ಪ್ರಮಾಣದಲ್ಲಿ ಮಾರ್ಫಿನ್ ಮತ್ತು ಮಿಡಜೋಲಮ್ ಎಂಬ ಒಂದು ರೀತಿಯ ನಿದ್ರಾಜನಕವನ್ನು ಇಂಜೆಕ್ಟ್ ಮಾಡಿದ್ದ. ಹೀಗೆ ಮಾಡುವುದರಿಂದ ಈ ಔಷಧಿಯ ಅಮಲಿನಲ್ಲಿರುತ್ತಿದ್ದ ರೋಗಿಗಳು ರಾತ್ರಿಯೆಲ್ಲಾ ಯಾವುದೇ ಸಹಾಯದ ಬೇಡಿಕೆ ಇಲ್ಲದೇ ನಿರ್ಜೀವವಾಗಿ ಮಲಗುತ್ತಿದ್ದರು. ಈ ರೀತಿ ರೋಗಿಗಳಿಗೆ ಆತ ಇಂಜೆಕ್ಟ್ ಮಾಡಿದ್ದರಿಂದ ರಾತ್ರಿಯಿಡೀ ಅವರಿಗೆ ಆರೈಕೆ ಮಾಡಬೇಕಾಗಿಲ್ಲ ಎಂದು ವಿಚಾರಣೆ ನಡೆಸಿದ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.
ಹೆಚ್ಚಿನ ಮಟ್ಟದ ಆರೈಕೆಯ ಅಗತ್ಯವಿರುವ ರೋಗಿಗಳಿಗೆ ಆತ ಕಿರಿಕಿರಿ ತೋರ್ಪಡಿಸಿದನು ಹಾಗೂ ಸಹಾನುಭೂತಿಯ ಕೊರತೆ ಅವನಲ್ಲಿತ್ತು ಹಾಗೂ ಆತ ಜೀವನ ಮತ್ತು ಸಾವಿನ ಮಾಸ್ಟರ್‌ನಂತೆ ಕೆಲಸ ಮಾಡಿದನು ಎಂದು ನ್ಯಾಯಾಲಯ ಆರೋಪಿಸಿದೆ. ಅಲ್ಲದೇ 15 ವರ್ಷಗಳ ನಂತರವೂ ಅವನನ್ನು ಬೇಗನೆ ಬಿಡುಗಡೆ ಮಾಡುವುಕ್ಕೆ ನ್ಯಾಯಾಲಯ ತಡೆ ನೀಡಿದೆ.

































