ಜೋಡಿ ಮೇಲ್ಭಾಗದ ಸೀಟ್‌ನಲ್ಲಿ ಕುಳಿತಿದ್ದು, ತಮ್ಮ ಸುತ್ತ ಪ್ರಯಾಣಿಕರಿರೋದನ್ನು ಮರೆತಿದ್ದಾರೆ. ಈ ಎಲ್ಲಾ ದೃಶ್ಯಗಳನ್ನು ವಿಂಡೋ ಸೀಟ್‌ನಲ್ಲಿ ಕುಳಿತಿದ್ದ ಪ್ರಯಾಣಿಕರೊಬ್ಬರು ತಮ್ಮ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದಾರೆ.
ವೈರಲ್ ಆಗಿರುವ ವಿಡಿಯೋ ಕ್ಲಿಪ್‌ನ್ನು ರಾಜೈಸ್ ವ್ಲಾಗ್ ಯುಟ್ಯೂಬ್ ಚಾನೆಲ್‌ನಲ್ಲಿ ಅಪ್ಲೋಡ್ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಹಂಚಿಕೊಂಡ ಈ ವಿಡಿಯೋಗೆ 7 ಲಕ್ಷಕ್ಕೂ ಅಧಿಕ ವ್ಯೂವ್‌ಗಳು (7,04,888 views) ಬಂದಿವೆ. ಈ ವಿಡಿಯೋವನ್ನು 30ನೇ ಸೆಪ್ಟೆಂಬರ್ 2022ರಂದು ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ಮೇಲಿನ ಸೀಟ್‌ನಲ್ಲಿ ಕುಳಿತ ಜೋಡಿ ಮಹಾನ್ ಕೆಲಸ ಮಾಡುತ್ತಿದೆ. ಸಾರ್ವಜನಿಕವಾಗಿ ಈ ರೀತಿ ನಡೆದುಕೊಳ್ಳುವುದು ತಪ್ಪು ಎಂದು ಕಮೆಂಟ್ ಮಾಡಿದ್ದಾರೆ.
ಜೋಡಿಯೊಂದು ರೈಲಿನಲ್ಲಿ ಮೇಲಿನ ಸೀಟ್‌ನಲ್ಲಿ ಕುಳಿತಿದೆ. ಮಧ್ಯದ ಸೀಟ್‌ನಲ್ಲಿ ಮಕ್ಕಳು ಕುಳಿತಿರೋದನ್ನು ಸಹ ವಿಡಿಯೋದಲ್ಲಿ ಕಾಣಬಹುದಾಗಿದೆ. ಯುವತಿ ನಿಧಾನವಾಗಿ ತನ್ನ ಮುಖವನ್ನು ಯುವಕನ ಬಳಿ ತೆಗೆದುಕೊಂಡು ಬರುತ್ತಾಳೆ. ಒಂದು ಕ್ಷಣ ಇಬ್ಬರು ಬೇರೆಯದ್ದೇ ಲೋಕಕ್ಕೆ ಹೋದಂತೆ ಕಾಣಿಸುತ್ತದೆ. ಮರುಕ್ಷಣವೇ ಅಲರ್ಟ್ ಆದ ಜೋಡಿ ವಾಸ್ತವಿಕ ಜಗತ್ತಿಗೆ ಬಂದು ಮಾತನಾಡಲು ಶುರು ಮಾಡುತ್ತಾರೆ. ಇದು ಸೈಡ್ ಲೋವರ್ ಬರ್ತ್‌ನಲ್ಲಿ ಕುಳಿತಿದ್ದ ಪ್ರಯಾಣಿಕರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಇದೇ ವಿಡಿಯೋದಲ್ಲಿ ಟೀ ಮಾರಾಟ ಮತ್ತು ತಿಂಡಿ ಮಾರಾಟ ಮಾಡುವ ಜನರು ಜೋರಾಗಿ ಕೂಗುತ್ತಾ ಬರುತ್ತಿರೋದನ್ನು ಗಮನಿಸಬಹುದು. ಇಷ್ಟು ಗಲಾಟೆ, ಜನಸಂದಣಿ ಇದ್ರೂ ಜೋಡಿ ಮಾತ್ರ ಕೆಲ ಕ್ಷಣ ರೊಮ್ಯಾಂಟಿಕ್ ಮೂಡ್‌ಗೆ ಜಾರಿತ್ತು.