ಚಿಕ್ಕಮಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ 10 ಬಾರಿ ಚಾಕುವಿನಿಂದ ಇರಿದು ಪಾಪಿ ಪತಿಯೊಬ್ಬ ಕೊಂದ ಘಟನೆ
ಚಿಕ್ಕಮಗಳೂರು ತಾಲೂಕಿನ ಕೈಮರಾ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ಕೀರ್ತಿ (26) ಮೃತ ದುರ್ದೈವಿ. ಪತಿ ಅವಿನಾಶ್ (32) ಕೊಲೆಗೈದ ಪಾಪಿ.
ಅವಿನಾಶ್-ಕೀರ್ತೀ 4 ವರ್ಷದ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಗಂಡ-ಹೆಂಡತಿ ಜಗಳದ ಹಿನ್ನೆಲೆ ಅವಿನಾಶ್ ಪತ್ನಿಯನ್ನು ಚುಚ್ಚಿ ಕೊಲೆ ಮಾಡಿದ್ದಾನೆ. ಪತ್ನಿಯನ್ನ ಕೊಲೆಗೈದ ಬಳಿಕ ಪತಿ ಅವಿನಾಶ್ ನಾಪತ್ತೆಯಾಗಿದ್ದಾನೆ.ನಾಪತ್ತೆಯಾದ ಅವಿನಾಶ್ ಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.