ನವದೆಹಲಿ : 77ನೇ ಗಣರಾಜ್ಯೋತ್ಸವದ ಸ್ಮರಣಾರ್ಥವಾಗಿ ಗೂಗಲ್ ಡೂಡಲ್ ವಿಶೇಷ ಗೌರವ ಸಲ್ಲಿಸಿದೆ. ಈ ಎನಿಮೆಟೆಡ್ ಡೂಡಲ್ನಲ್ಲಿ ರಾಷ್ಟ್ರದ ಹೆಮ್ಮೆಯನ್ನು ಪ್ರತಿಬಿಂಬಿಸುವ ಅಂಶಗಳನ್ನು ಪ್ರದರ್ಶಿಸಲಾಗಿದೆ.
ಗೂಗಲ್ ಸರ್ಚ್ ಇಂಜಿನ್ನ ಎಲ್ಲಾ ಅಕ್ಷರಗಳು ಗಣರಾಜ್ಯೋತ್ಸವದ ನಿಮಿತ್ತ ವಿಶಿಷ್ಟ ವಿನ್ಯಾಸವನ್ನ ಒಳಗೊಂಡಿದೆ. ರಾಕೆಟ್ ಉಡಾವಣೆ, ಟೆಕ್, ಬಾಹ್ಯಾಕಾಶ, ಕ್ರಿಕೆಟ್ ಸೇರಿದಂತೆ ಭಾರತದ ಭಾರತದ ಸಾಧನೆಗಳನ್ನ ಪ್ರತಿಬಿಂಬಿಸುವ ಚಿತ್ರವನ್ನ ಒಳಗೊಂಡಿದೆ. ಇದೆಲ್ಲ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಗೂಗಲ್ ಡೂಡಲ್ನಲ್ಲಿ ಹಾಕಲಾಗಿದೆ.
ಈ ಬಾರಿ ಗಣರಾಜ್ಯೋತ್ಸವ ಆಚರಣೆಯು ‘ವಂದೇ ಮಾತರಂಗೆ 150 ವರ್ಷಗಳು’ ಎಂಬ ವಿಷಯದ ಮೇಲೆ ನಡೆಯಲಿದೆ. 1875ರಲ್ಲಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ವಿರಚಿತ ವಂದೇ ಮಾತರಂಗೆ ಇದೀಗ 150 ವರ್ಷಗಳ ಸಂಭ್ರಮ. ಈ ಹಿನ್ನೆಲೆ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಂದೇ ಮಾತರಂನಿಂದ ಪ್ರೇರಿತವಾದ ಸಾಂಸ್ಕೃತಿಕ ಹಾಗೂ ಪ್ರದರ್ಶನಗಳು ಪಾಲ್ಗೊಳ್ಳಲು ಸೂಚಿಸಲಾಗಿದೆ.

































