ಶಿವಮೊಗ್ಗ: ಮೊಬೈಲ್ ನೋಡಬೇಡ ಎಂದು ತಾಯಿ ಹೇಳಿದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹಾರನಹಳ್ಳಿಯಲ್ಲಿ ನಡೆದಿದೆ. ಧನುಶ್ರೀ (20 ) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದು, ಯಾವಾಗಲೂ ಮೊಬೈಲ್ ನೋಡುವುದರಲ್ಲೇ ಕಾಲಹರಣ ಮಾಡುತ್ತಿದ್ದ ಮಗಳಿಗೆ ತಾಯಿ ಬುದ್ದಿವಾದ ಹೇಳಿದ್ದಾರೆ. ಮೊಬೈಲ್ ಹೆಚ್ಚಾಗಿ ನೋಡಬೇಡ ಎಂದು ಹೇಳಿದ್ದಾರೆ. ಇದರಿಂದ ಮನನೊಂದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.
