ಬೆಂಗಳೂರು: ಯುಗಾದಿ ಹಬ್ಬದ ಸಂಭ್ರಮದಲ್ಲಿದ್ದ ಕರ್ನಾಟಕ ಜನತೆಗೆ ಸರ್ಕಾರ ದರ ಏರಿಕೆಯ ಬರೆ ನೀಡುತ್ತಿದೆ.
ಏಪ್ರಿಲ್ 1ರಿಂದ ಹೊಸ ವಾಹನ ಖರೀದಿಗೆ ಸರ್ಕಾರದ ಹೊಸ ತೆರಿಗೆ ನೀತಿ ಅನ್ವಯವಾಗಲಿದ್ದು, ವಾಹನ ಮಾಲೀಕರಿಗೆ ಎರಡೆರಡು ಆಘಾತ ಎದುರಾಗಲಿದೆ.
ರಾಜ್ಯ ಸರ್ಕಾರವು 10 ಲಕ್ಷ ರೂ. ಒಳಗಿನ ಯೆಲ್ಲೋ ಬೋರ್ಡ್ ವಾಹನ ಖರೀದಿಗೆ ಕೂಡ ಲೈಫ್ ಟೈಮ್ ಟ್ಯಾಕ್ಸ್ ವಿಧಿಸುವುದಾಗಿ ಬಜೆಟ್ ನಲ್ಲಿ ಘೋಷಿಸಿದೆ. ಇದರಿಂದಾಗಿ ಹೊಸ ವಾಹನ ಖರೀದಿಗೆ ಹೆಚ್ಚಿನ ವೆಚ್ಚ ತಗುಲಲಿದೆ.
ಹತ್ತು ಲಕ್ಷ ರೂಪಾಯಿ ಮೊತ್ತದ ಒಳಗಿನ ಯೆಲ್ಲೋ ಬೋರ್ಡ್ ವಾಹನಗಳಿಗೆ ಶೇ 5 ರ ಲೈಫ್ ಟೈಮ್ ಟ್ಯಾಕ್ಸ್ ವಿಧಿಸಲಾಗಿದ್ದು, ಸೆಸ್ ಸೇರಿ ಈ ಮೊತ್ತ ಶೇ 7 ಆಗುವ ಸಾಧ್ಯತೆಯಿದೆ. 10 ಲಕ್ಷ ರೂ. ಬೆಲೆಯ ಕಾರು ಖರೀದಿಸಿದರೆ, ವಾಹನ ಮಾಲೀಕರು ಸುಮಾರು 50 ಸಾವಿರದಿಂದ 70 ಸಾವಿರ ರೂ. ತೆರಿಗೆ ಪಾವತಿಸಬೇಕಾಗುತ್ತದೆ.
ಈ ಹೊಸ ನಿಯಮವು ಈ ಬಾರಿಯ ಬಜೆಟ್‌ನಲ್ಲಿ ಘೋಷಣೆಯಾಗಿದೆ. ಈ ಬಾರಿ, ಹತ್ತು ಲಕ್ಷ ರೂಪಾಯಿ ವಾಹನಗಳಿಗೂ ಹೊಸ ನಿಯಮ ಅನ್ವಯಿಸಲಿದ್ದು, ಹೆಚ್ಚಿನ ವಾಹನ ಖರೀದಿದಾರರು ಆರ್ಥಿಕ ಹೊರೆ ಅನುಭವಿಸಬೇಕಾಗಲಿದೆ.
ಇದೇ ವೇಳೆ, 25 ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಎಲೆಕ್ಟ್ರಿಕ್ ಕಾರುಗಳಿಗೆ ಶೇ 10 ರ ತೆರಿಗೆ ವಿಧಿಸಲಾಗಿದೆ. ಮಿನಿ ಲಾರಿಗಳಿಗೆ ಈ ಹಿಂದೆ ವಿಧಿಸಲಾಗುತ್ತಿದ್ದ ಶೇ 6 ರ ತೆರಿಗೆಯನ್ನು ಏಪ್ರಿಲ್‌ನಿಂದ ಶೇ 8 ಕ್ಕೆಹೆಚ್ಚಿಸಲಾಗಿದೆ.
ಇನ್ನು, ಉಕ್ಕಿನ ಬೆಲೆ ಏರಿಕೆಯ ಹೆಸರಲ್ಲಿ ವಾಹನ ತಯಾರಿಕಾ ಕಂಪನಿಗಳು ಏಪ್ರಿಲ್ 1ರಿಂದ ಶೇ 3 ರಿಂದ 4 ರಷ್ಟು ದರ ಹೆಚ್ಚಳ ಮಾಡಲು ತಯಾರಿ ನಡೆಸುತ್ತಿದ್ದು, ಇದು ಹೊಸ ವಾಹನ ಖರೀದಿದಾರರಿಗೆ ಮತ್ತೊಂದು ಆಘಾತವಾಗಲಿದೆ. ಒಳಮೀಸಲಾತಿ ಮಧ್ಯಂತರ ವರದಿ ಸಿಎಂಗೆ ಹಸ್ತಾಂತರ ಮಾಡಿದ ಆಯೋಗ