ಹೈದರಾಬಾದ್: ತೆಲಂಗಾಣದಲ್ಲಿ ಕಳ್ಳನೊಬ್ಬ ಮದ್ಯದಂಗಡಿಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ವೇಳೆ ಎಣ್ಣೆ ಕುಡಿದು ನಶೆಯಲ್ಲಿ ನಿದ್ದೆಗೆ ಜಾರಿ ಪೊಲೀಸರ ಅತಿಥಿಯಾಗಿದ್ದಾನೆ.
ಅಂಗಡಿಗೆ ನುಗ್ಗಿ ಚಾವಣಿಯ ಹೆಂಚುಗಳನ್ನು ಎಚ್ಚರಿಕೆಯಿಂದ ತೆಗೆದು, ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ, ಡ್ರಾಯರ್‌ಗಳಿಂದ ನಗದು ಸಂಗ್ರಹಿಸಿ, ಲೂಟಿ ಮಾಡಿದ್ದಾನೆ. ಎಲ್ಲವೂ ಯೋಜನೆಯ ಪ್ರಕಾರ ನಡೆಯುತ್ತಿತ್ತು. ಆದರೆ ಈ ಕಳ್ಳ, ಸಂತಸದಿಂದ ಎಣ್ಣೆ ಕುಡಿದು ನಿದ್ದೆಗೆ ಜಾರುತ್ತಾನೆ. ಮರುದಿನ ಬೆಳಿಗ್ಗೆ ಅಂಗಡಿಯ ಸಿಬ್ಬಂದಿ ಬಂದು ನೋಡಿದಾಗ ನಗದು ಹಾಗೂ ಮದ್ಯದ ಬಾಟಲಿಗಳು ಕಳ್ಳನ ಸುತ್ತ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ದರೋಡೆ ವೇಳೆ ಆತನ ಮುಖದಲ್ಲಿ ಸಣ್ಣ ಗಾಯದ ಗುರುತು ಇತ್ತು. ಕಳ್ಳನ ಅವಾಂತರ ಕಂಡು ಸಬ್ಬಂದಿ ಪೊಲೀಸರಿಗೆ ತಿಳಿಸುತ್ತಾನೆ.
ಇನ್ನೂ ಕಂಠಪೂರ್ತಿ ಕುಡಿದಿರುವ ಕಳ್ಳನ ಗುರುತು ಪತ್ತೆಯಾಗಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿದ್ದಾರೆ ಆದರೆ ಅವರು ಪ್ರಜ್ಞೆಗೆ ಮರಳಲು ಕಾಯುತ್ತಿದ್ದಾರೆ. ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.