ದೆಹಲಿಯ ಭಾರತ ಮಂಟಪದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ‘ಅಷ್ಟಲಕ್ಷ್ಮಿ ಮಹೋತ್ಸವ’ವನ್ನು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಉದ್ಘಾಟಿಸಿದರು.
2024 ಡಿಸೆಂಬರ್ 6 ರಿಂದ 8 ರವರೆಗೆ ಆಯೋಜಿಸಲಾದ ಈವೆಂಟ್ ನಲ್ಲಿ, ಈಶಾನ್ಯ ಭಾರತದ ರೋಮಾಂಚಕ ಸಂಸ್ಕೃತಿಯನ್ನು ಬಿಂಬಿಸುತ್ತದೆ. ಭಾರತ ಸುಸಂಸ್ಕೃತ ದೇಶ. ಪ್ರತಿಯೊಬ್ಬ ಭಾರತೀಯನ ಹೃದಯದಲ್ಲಿ ದೇಶದ ಬಗ್ಗೆ ಅಪಾರವಾದ ಗೌರವ, ಪ್ರೀತಿ ಇದೆ. ಮಕ್ಕಳಿರಲಿ, ದೊಡ್ಡವರಿರಲಿ ಭಾರತ ಅಂದ್ರೆ ಸಾಕು ಒಂದು ಅದ್ಭುತ ಭಾವನೆ ಮೂಡುತ್ತದೆ.
ಈ ಮಧ್ಯೆ, ದೆಹಲಿಯ ಭಾರತ ಮಂಟಪದಲ್ಲಿ ಈಶಾನ್ಯ ಭಾರತದ ರಾಜ್ಯಗಳ ಸಿಎಂಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲಿ ಪುಟ್ಟ ಬಾಲಕಿಯೊಬ್ಬಳು ‘ವಂದೇ ಮಾತರಂ’ ಹಾಡಿರುವ ವಿಡಿಯೋ ವೈರಲ್ ಆಗಿದೆ. ಈ ಹಿಂದೆ, ಎಆರ್ ರೆಹಮಾನ್ ಅವರ ‘ವಂದೇ ಮಾತರಂ’ ಹಾಡನ್ನು ಇದೇ ಬಾಲಕಿ ಹಾಡುವ ವೀಡಿಯೊವನ್ನು ಮಿಜೋರಾಂನ ಮಾಜಿ ಮುಖ್ಯಮಂತ್ರಿ ಹಂಚಿಕೊಂಡಿದ್ದರು.