ಗಂಗಾವತಿ: ಮಗುವಿಗೆ ಬೆಂಕಿ ಹಚ್ಚಿದ ಮಹಿಳೆಯೋರ್ವಳು ತಾನು ಸಹ ಬೆಂಕಿ ಹಚ್ಚಿಕೊಂಡು ದುರ್ಘಟನೆ ಇಲ್ಲಿನ ೩ನೇ ವಾರ್ಡಿನಲ್ಲಿ ಶುಕ್ರವಾರ ಘಟನೆ ಜರುಗಿದೆ
ಸುಮಂಗಲ (೩೫) ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳೆ. ಪುತ್ರಿ (೫) ಸಮನ್ವಿತಾ ತೀವ್ರ ಗಾಯಗೊಂಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಗೆ ದಾಖಲು ಮಾಡಲಾಗಿದೆ.
ಮನೆಯ ಬೀಗ ಹಾಕಿಕೊಂಡು ಮೊದಲಿಗೆ ಪುತ್ರಿಗೆ ಬೆಂಕಿ ಹಚ್ಚಿ ನಂತರ ಮಹಿಳೆ ತಾನು ಬೆಂಕಿ ಹಚ್ಚಿಕೊಂಡಿರುವುದು ಗೊತ್ತಾಗಿದ್ದು ಅಕ್ಕಪಕ್ಕದ ಮನೆಯವರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದರು. ಕಳೆದ ೧೦ ವರ್ಷಗಳಿಂದ ಮನೆ ಬಾಡಿಗೆಯಲ್ಲಿದ್ದ ಶಿಕ್ಷಕ ರಾಘವೇಂದ್ರ ಕುಟುಂಬ ಇದಾಗಿದ್ದು ಪತಿಯ ಕಿರುಕುಳ ಎಂದು ಶಂಕಿಸಲಾಗುತ್ತಿದೆ.
