ಬೆಳ್ತಂಗಡಿ: 2012ರಲ್ಲಿ ಧರ್ಮಸ್ಥಳ ದಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ ಸಂಬಂಧಿಸಿದಂತೆ ಈ ಘಟನೆಯ ಸಂದರ್ಭದಲ್ಲಿ ತಾನು ಅಲ್ಲಿದ್ದು, ಸೌಜನ್ಯಳನ್ನು ಅಪಹರಿಸಿ ಕೊಂಡು ಹೋಗುತ್ತಿರುವುದನ್ನು ತಾನು ನೋಡಿರುವುದಾಗಿ ಮಹಿಳೆಯೋರ್ವಳು ಎಸ್ಐಟಿ ಕಚೇರಿಗೆ ದೂರು ನೀಡಿದ್ದಾರೆ.
ಮಂಡ್ಯ ಮೂಲದ ಚಿಕ್ಕಕೆಂಪಮ್ಮ ಎಂಬ ಮಹಿಳೆ 62 ವರ್ಷದ ಮಹಿಳೆ ಎಸ್ಐಟಿ ಕಚೇರಿಗೆ ದೂರು ನೀಡಿದವರಾಗಿದ್ದಾರೆ.
2012 ಅಕ್ಟೋಬರ್ ನಲ್ಲಿ ಈ ಘಟನೆ ನಡೆದಿದ್ದು, ಘಟನೆಯ ದಿನ ಚಿಕ್ಕಕೆಂಪಮ್ಮ ತನ್ನ ಊರಿನ ನಿಂಗಮ್ಮ ಜೊತೆ ಆ ದಿನ ಧರ್ಮಸ್ಥಳಕ್ಕೆ ಆಗಮಿಸಿದ್ದು, ಪ್ರಕೃತಿ ಚಿಕಿತ್ಸಾಲಯಕ್ಕೆ ತೆರಳಲು ಘಟನೆ ನಡೆದ ಸ್ಥಳದ ಬಳಿ ನಿಂತಿದ್ದರು. ಈ ಸಂದರ್ಭದಲ್ಲಿ ತೊದಲು ಮಾತನಾಡುವ ವ್ಯಕ್ತಿ ಬಂದು ತಮ್ಮಲ್ಲಿ ಮಾತನಾಡಿದ್ದು, ಬಳಿಕ ಬೂದು ಬಣ್ಣದ ಕಾರಿನಲ್ಲಿ ಬಂದ ಗುಂಪು ಕೆಲವೇ ಮೊದಲು ಹೋದ ಯುವತಿಯನ್ನು ಅಪಹರಿಸಿಕೊಂಡು ಹೋಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಎಸ್ಐಟಿ ಧರ್ಮಸ್ಥಳ ದ ಅಸಹಜ ಸಾವಿನ ತನಿಖೆ ನಡೆಸುತ್ತಿದ್ದು, ಈ ಪ್ರಕರಣದ ತನಿಖೆಗೆ ಬೇಕಾದ ಮಾಹಿತಿಯನ್ನು ನೀಡಿ ತನಿಖಾ ತಂಡದ ಜೊತೆ ಸಹಕರಿಸುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.