ತಿರುವನಂತಪುರಂ: ಪತಿ ಸೇರಿದಂತೆ ಮನೆಯವರ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಕೇರಳ ಮೂಲದ ಮಹಿಳೆಯೊಬ್ಬರು ತನ್ನ ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕೊಂದು ಬಳಿಕ ತಾನೂ ಆತ್ಮಹ*ತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆಯೊಂದು ಶಾರ್ಜಾದಲ್ಲಿ ನಡೆದಿದ್ದು ಇದೀಗ ಬೆಳಕಿಗೆ ಬಂದಿದೆ.
ಕೇರಳದ ಕೊಲ್ಲಂ ನಿವಾಸಿಯಾಗಿರುವ ವಿಪಂಜಿಕಾ ಮಣಿ(32) ಮತ್ತು ಆಕೆಯ ಒಂದೂವರೆ ವರ್ಷದ ಹೆಣ್ಣು ಮಗು ವೈಭವಿ ಮೃತ ದುರ್ದೈವಿಗಳು. ಘಟನೆ ಸಂಬಂಧ ವಿಪಂಜಿಕಾ ಮಣಿ ಅವರ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಪಂಜಿಕಾ ಮಣಿ ಮತ್ತು ನಿಧೀಶ್ ದಂಪತಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ನೆಲೆಸಿದ್ದು ಇವರಿಗೆ ಒಂದೂವರೆ ವರ್ಷದ ಹೆಣ್ಣು ಮಗುವಿದ್ದು ಜುಲೈ 8 ಶಾರ್ಜಾದ ಅಲ್ ನಹ್ದಾದಲ್ಲಿ ತಮ್ಮ ಮನೆಯಲ್ಲಿ ವಿಪಂಜಿಕಾ ಮಣಿ ಹಾಗೂ ತನ್ನ ಒಂದೂವರೆ ವರ್ಷದ ಮಗಳೊಂದಿಗೆ ಶವವಾಗಿ ಪತ್ತೆಯಾಗಿದ್ದಾರೆ ಎನ್ನಲಾಗಿದ್ದು ವಿಷಯ ಗೊತ್ತಾಗುತ್ತಿದ್ದಂತೆ ವಿಪಂಜಿಕಾ ಅವರ ತಾಯಿ ಪತಿ ಹಾಗೂ ಮಾವನ ವಿರುದ್ಧ ಪೊಲೀಸ್ ಠಾಣೆಯಲ್ಲಿ ವರದಕ್ಷಿಣೆ ಕಿರುಕುಳ ದೂರು ದಾಖಲಿಸಿದ್ದಾರೆ.
ಇನ್ನು ಆತ್ಮಹತ್ಯೆಗೂ ಮೊದಲು ವಿಪಂಜಿಕಾ ತನ್ನ ಫೇಸ್ ಬುಕ್ ಖಾತೆಯಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು ಅದರಲ್ಲಿ ಪತಿ, ಹಾಗೂ ಮಾವ ನೀಡುತ್ತಿದ್ದ ಕಿರುಕುಳದ ಕುರಿತು ಬರೆದುಕೊಂಡಿದ್ದಾರೆ, ಅಲ್ಲದೆ ಮಾವ ತನ್ನ ತನ್ನ ಜೊತೆ ಕೆಟ್ಟದಾಗಿ ವರ್ತಿಸಿರುವುದು ಅಲ್ಲದೆ ಈ ವಿಚಾರವನ್ನು ಪತಿ ನಿಧೀಶ್ ಬಳಿ ಹೇಳಿಕೊಂಡರು ಪತಿ ಕ್ಯಾರೇ ಅನ್ನಲಿಲ್ಲ ಅಲ್ಲದೆ ತಂದೆಯ ಪರವಾಗಿ ವಾದ ಮಾಡಿದ್ದರು, ಜೊತೆಗೆ ಪತಿ ದಿನಂಪ್ರತಿ ನನ್ನ ಮೇಲೆ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡುತ್ತಿದ್ದಾರೆ ಇನ್ನು ನನಗೆ ಕಿರುಕುಳ ಸಹಿಸಿಕೊಳ್ಳಲು ಸಾಧ್ಯವಿಲ್ಲ ಇವರನ್ನು ಬಿಡಬೇಡಿ ಎಂದು ಬರೆದುಕೊಂಡಿದ್ದಾರೆ.
ಇನ್ನು ಘಟನೆ ಕುರಿತು ಪೊಲೀಸರಿಗೆ ನೀಡಿದ ದೂರಿನಲ್ಲಿ ತನ್ನ ಮಗಳು ನೋಡಲು ಸುಂದರವಾಗಿರುವುದನ್ನು ಸಹಿಸಿಕೊಳ್ಳಲು ಆಗದ ಪತಿ ಮಗಳ ತಲೆಯ ಕೂದಲನ್ನು ಬೋಳಿಸಿ ವಿಕೃತಿ ಮೆರೆದಿದ್ದಾನೆ, ತನ್ನ ಕಪ್ಪಾಗಿ ಇರುವುದರಿಂದ ನೀನು ಕೂಡ ಕೆಟ್ಟದಾಗಿ ಕಾಣಬೇಕು ಎಂಬ ಉದ್ದೇಶದಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಗಾಯಗಳನ್ನು ಮಾಡಿದ್ದ ದಿನಂಪ್ರತಿ ಮಗಳಿಗೆ ಚಿತ್ರ ಹಿಂಸೆ ನೀಡುತ್ತಿದ್ದ ಎಂದು ದೂರಿದ್ದಾರೆ.
ಮದುವೆ ಸಮಯದಲ್ಲಿ ಹೆಚ್ಚಿನ ವರದಕ್ಷಿಣೆ ನೀಡಲಾಗಿತ್ತು ಆದರೆ ಅದು ಸಾಕಾಗಿಲ್ಲ ಎಂದು ಮಗಳ ಬಳಿ ಪತಿ ಮನೆಯವರು ನಿರಂತರ ಕಿರುಕುಳ ನೀಡಿತ್ತಿದ್ದರು ಅಲ್ಲದೆ ದೈಹಿಕ ಹಲ್ಲೆಯನ್ನೂ ಮಾಡುತ್ತಿದ್ದರು ಈ ಎಲ್ಲ ವಿಚಾರವನ್ನು ಮಗಳು ನನ್ನ ಬಳಿ ಹೇಳಿಕೊಂಡಿದ್ದಳು ಆದರೆ ಇಂದಲ್ಲಾ ನಾಳೆ ಸರಿ ಹೋಗಬಹುದು ಎಂದುಕೊಂಡಿದ್ದೆ ಆದರೆ ಅದರ ನಡುವೆ ಈ ರೀತಿ ನಡೆದಿದೆ ಎಂದು ವಿಪಂಜಿಕಾ ತಾಯಿ ಹೇಳಿಕೊಂಡಿದ್ದಾರೆ.
ತಾಯಿ ನೀಡಿದ ದೂರಿನಲ್ಲಿ ವಿಪಂಜಿಕಾ ಅವರ ಪತಿ ನಿಧೀಶ್ಮ್ ಆತನ ಸಹೋದರಿ ನೀತು ಮತ್ತು ಅವರ ತಂದೆ ಸೇರಿ ಮೂವರ ವಿರುದ್ಧ ದೂರು ದಾಖಲಿಸಲಾಗಿದೆ.
ವಿಪಂಜಿಕಾ ಅವರ ತಾಯಿ ನೀಡಿದ ದೂರಿನ ಮೇಲೆ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ನ ಸೆಕ್ಷನ್ 85 (ಮಹಿಳೆಯ ಗಂಡ ಅಥವಾ ಆಕೆಯ ಸಂಬಂಧಿ ಅವಳನ್ನು ಕ್ರೌರ್ಯಕ್ಕೆ ಒಳಪಡಿಸುವುದು) ಮತ್ತು 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ, ಜೊತೆಗೆ ವರದಕ್ಷಿಣೆ ನಿಷೇಧ ಕಾಯ್ದೆ, 1961 ರ ಸೆಕ್ಷನ್ 3 (ವರದಕ್ಷಿಣೆ ನೀಡುವುದು ಅಥವಾ ತೆಗೆದುಕೊಳ್ಳುವುದು) ಮತ್ತು 4 (ವರದಕ್ಷಿಣೆ ಬೇಡಿಕೆಗಾಗಿ ದಂಡ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.