ಮಹಿಳೆಯೊಬ್ಬರು ಕ್ರಿಸ್‌ಮಸ್ ಪಾರ್ಟಿಯಲ್ಲಿ ಸ್ನೇಹಿತರಿಗೆ ತನ್ನ ಎದೆಹಾಲನ್ನೇ ಕುಡಿಯಲು ಕೊಟ್ಟಿದ್ದಾರೆ. ಹೌದು, ಆಸ್ಟ್ರೇಲಿಯಾದ ಇನ್‌ಫ್ಲುಯೆನ್ಸರ್ ಕೂಡಾ ತನ್ನ ಸ್ನೇಹಿತರ ಜೊತೆ ಟ್ರಿಪ್ ಹೋಗಿದ್ದು, ಸಮುದ್ರದಲ್ಲಿ ದೋಣಿ ವಿಹಾರ ಮಾಡುವ ಸಂದರ್ಭದಲ್ಲಿ ಆಕೆ ತನ್ನ ಸ್ನೇಹಿತರಿಗೆ ಎದೆ ಹಾಲನ್ನು ಕುಡಿಯಲು ಆಫರ್ ಮಾಡಿದ್ದಾರೆ. ಹೌದು ಬ್ರೆಸ್ಟ್ ಮಿಲ್ಕ್ ಪಂಪಿಂಗ್‌ನಲ್ಲಿ ಪಂಪ್ ಮಾಡಿದ ಎದೆ ಹಾಲನ್ನು ಸ್ನೇಹಿತರಿಗೆ ಕುಡಿಯಲು ಕೊಟ್ಟಿದ್ದಾರೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಮೂರು ಮಕ್ಕಳ ತಾಯಿ ಸಾರಾ ಕ್ರಿಸ್‌ಮಸ್ ಪಾರ್ಟಿಯಲ್ಲಿ ತನ್ನ ಸ್ನೇಹಿತರಿಗೆ ಕುಡಿಯಲು ಎದೆಹಾಲನ್ನು ನೀಡಿದ್ದಾರೆ. ಪಂಪ್ ಮಾಡಿದ ಎದೆ ಹಾಲನ್ನು ಫ್ರೆಂಡ್ಸ್‌ಗೆ ಕುಡಿಯಲು ಕೊಟ್ಟಿದ್ದು, ಹಾಲು ಕುಡಿದ ಸ್ನೇಹಿತರು ಶಾಕಿಂಗ್ ರಿಯಾಕ್ಷನ್ ನೀಡಿದ್ದಾರೆ.
https://www.instagram.com/reel/DDoaA_vzsb0/?igsh=MWY5ZTRha3l4cGZkMw==
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಸಾರಾ ಪಂಪ್ ಮಾಡಿದ ಎದೆಹಾಲನ್ನು ಸ್ನೇಹಿತರಿಗೆ ಕುಡಿಯಲು ಆಫರ್ ಮಾಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಇವರ ಇಬ್ಬರು ಗೆಳತಿಯರು ಎದೆಹಾಲನ್ನು ಕುಡಿದಿದ್ದು, ಹಾಲು ಕುಡಿದ ಆ ಇಬ್ಬರೂ ಶಾಕಿಂಗ್ ರಿಯಾಕ್ಷನ್ ಕೊಟ್ಟಿದ್ದಾರೆ..