ಕಾಸರಗೋಡು: ಇದೊಂದು ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ. ಕರೆಂಟ್ ಬಿಲ್ ಕಟ್ಟದ ಕಾರಣಕ್ಕೆ ವಿದ್ಯುತ್ ನಿಗಮದ ಅಧಿಕಾರಿಗಳು ಮನೆಯ ಕರೆಂಟ್ ಕಟ್ ಮಾಡಿದ್ದಕ್ಕೆ ಸಿಟ್ಟುಕೊಂಡು ಯುವಕನೊಬ್ಬ ತನ್ನ ಮನೆಯ ಸುತ್ತಮುತ್ತಲಿರುವ ಬರೋಬ್ಬರಿ 30 ಟ್ರಾನ್ಸಫಾರ್ಮರ್ ಗಳ ಫ್ಯೂಸ್ ನ್ನು ಕಿತ್ತು ಬಿಸಾಕಿದ ಘಟನೆ ಕಾಸರಗೋಡಿನಲ್ಲಿ ನಡೆದಿದೆ. ಇದರಿಂದಾಗಿ ಬರೋಬ್ಬರಿ 6 ಸಾವಿರ ಮನೆಗೆ ಕರೆಂಟ್ ಇಲ್ಲದಂತಾಗಿತ್ತು.
ಮದ್ದೂರು ಪಂಚಾಯತ್ನ ಚೂರಿ ನಿವಾಸಿಯಾದ ಯುವಕನಿಗೆ ಸಾಮಾನ್ಯವಾಗಿ ಎರಡು ತಿಂಗಳಿಗೆ ₹18,000 ರಿಂದ ₹20,000 ಬಿಲ್ ಬರುತ್ತಿತ್ತು. ಆದರೆ ಈ ಬಾರಿ ಬಿಲ್ ₹22,000 ಕ್ಕೆ ತಲುಪಿತು. ವಿದ್ಯುತ್ ನಿಗಮದ ಅಧಿಕಾರಿಗಳು ಬಿಲ್ ಪಾವತಿಸುವಂತೆ ಕೇಳಿಕೊಂಡರು ಆತ ಕಟ್ಟದೆ ಗಲಾಟೆ ಮಾಡಿದ್ದ. ಇದರಿಂದಾಗಿ ಅಧಿಕಾರಿಗಳು ಶುಕ್ರವಾರ ಬೆಳಿಗ್ಗೆ ಆತನ ಮನೆಯ ಕರೆಂಟ್ ನ್ನು ಕಟ್ ಮಾಡಿದ್ದರು. ಬಳಿಕ ಯುವಕ ಸಂಜೆ ನೆಲ್ಲಿಕ್ಕುನ್ನು ವಿಭಾಗ ಕಚೇರಿಗೆ ಆಗಮಿಸಿ ಅಲ್ಲಿ ಗಲಾಟೆ ಮಾಡಿದ್ದಾನೆ. ಬಳಿಕ ಆತನ ಮಾಡಿದ ಕೆಲಸವನ್ನು ಕೇರಳ ವಿದ್ಯುತ್ ನಿಗಮದ ಯಾವ ಅಧಿಕಾರಿಯೂ ಉಹಿಸಿರಲಿಲ್ಲ.
ಗಲಾಟೆ ಮಾಡಿಕೊಂಡು ಸೀದಾ ಹೊರಟ ಯುವಕ ದಾರಿಯಲ್ಲಿ ಸಿಕ್ಕ ಸಿಕ್ಕ ಟ್ರಾನ್ಸಫಾರ್ಮರ್ ಗಳ ಪ್ಯೂಸ್ ನ್ನು ತೆಗೆಯುತ್ತಾ ಹೋಗಿದ್ದಾನೆ. ಒಂದು ಟ್ರಾನ್ಸಪಾರ್ಮರ್ ಗಳನ್ನು ಆರರಿಂದ ಒಂಬತ್ತು ಪ್ಯೂಸ್ ಗಳು ಇರುತ್ತವೆ. ಯುವಕ ಪೊಲೀಸ್ ಠಾಣೆ ಜಂಕ್ಷನ್, ಮದ್ದೂರು ರಸ್ತೆ, ಚೂರಿ, ಉಲ್ಲಿಯತಡ್ಕ, ಚೌಕಿ ಮೂಲಕ ವಾಹನ ಚಲಾಯಿಸಿ, ನಂತರ ರಾಷ್ಟ್ರೀಯ ಹೆದ್ದಾರಿ 66 ಮತ್ತು ಕಾಸರಗೋಡು ಪಟ್ಟಣ ಸೇರಿದಂತೆ ಒಂದರ ನಂತರ ಒಂದರಂತೆ ಟ್ರಾನ್ಸ್ಫಾರ್ಮರ್ಗಳಿಂದ ಫ್ಯೂಸ್ಗಳನ್ನು ತೆಗೆದಿದ್ದಾನೆ. ತೆಗೆದ ಎಲ್ಲಾ ಪ್ಯೂಸ್ ಗಳನ್ನು ರಸ್ತೆಗೆ ಎಸೆದು ಒಡೆದು ಹಾಕಿದ್ದಾನೆ.
ಒಟ್ಟು ನೆಲ್ಲಿಕ್ಕುನ್ನು ಪರಿಸರದ 24 ಟ್ರಾನ್ಸ್ಫಾರ್ಮರ್ಗಳು ಮತ್ತು ಕಾಸರಗೋಡು ಪರಿಸರದ ಆರು ಟ್ರಾನ್ಸ್ಫಾರ್ಮರ್ಗಳನ್ನು ಸೇರಿದಂತೆ ಒಟ್ಟು 30 ಟ್ರಾನ್ಸ್ ಫಾರ್ಮರ್ ಗಳ ಪ್ಯೂಸ್ ಕಿತ್ತಿದ್ದಾನೆ. ಪ್ರತಿ ಟ್ರಾನ್ಸ್ಫಾರ್ಮರ್ ಸುಮಾರು 200 ಮನೆಗಳಿಗೆ ಕರೆಂಟ್ ನೀಡುತ್ತದೆ. ಒಟ್ಟಾಗಿ 6,000 ಕ್ಕೂ ಹೆಚ್ಚು ಮನೆಗಳಿಗೆ ಕರೆಂಟ್ ಇಲ್ಲದಂತಾಗಿತ್ತು. ಇದಾದ ಬಳಿಕ ಸಂಜೆ 5 ಗಂಟೆಯಿಂದ ಕೆಎಸ್ಇಬಿಗೆ ಕರೆಂಟ್ ಇಲ್ಲ ಎಂದು ಪೋನ್ ಕರೆಗಳು ಬರಲಾರಂಭಿಸಿತು. ಒಂದೇ ಸಮನೆ ಇಷ್ಟೊಂದು ಕರೆಗಳು ಬರಲು ಸಾಧ್ಯವಿಲ್ಲ ಎಂದು ಅಲ್ಲಿದ್ದ ಸಿಬ್ಬಂದಿ ಫೀಡರ್ ಅಥವಾ ಎಚ್ಟಿ ಲೈನ್ನಲ್ಲಿ ಸಮಸ್ಯೆ ಇದ್ದಾಗ ಮಾತ್ರ ಇಷ್ಟೊಂದು ದೊಡ್ಡ ಪ್ರಮಾಣದ ವಿದ್ಯುತ್ ಕಡಿತ ಸಂಭವಿಸುತ್ತದೆ. ಎರಡೂ ಸರಿಯಾಗಿದ್ದವು, ಆದರೆ 6 ಸಾವಿರಕ್ಕೂ ಅಧಿಕ ಮನೆಯಲ್ಲಿ ಕರೆಂಟ್ ಇರಲಿಲ್ಲ. ಎಷ್ಟೇ ತಲೆಕೆಡಿಸಿಕೊಂಡರು ಸಮಸ್ಯೆ ಎನೆಂದು ಸಿಬ್ಬಂದಿಗಳಿಗೆ ತಿಳಿಯಲಿಲ್ಲ. ಈ ವೇಳೆ ಕರೆ ಮಾಡಿದ ವ್ಯಕ್ತಿಯೊಬ್ಬ ಕಪ್ಪು ಬಣ್ಣದ ಟೀ ಶರ್ಟ್ ಧರಿಸಿದ್ದ ಯುವಕನೊಬ್ಬ ಟ್ರಾನ್ಸ್ ಫಾರ್ಮರ್ ಪ್ಯೂಸ್ ಕಿಳುತ್ತಿದ್ದು, ನೋಡಿದಾಗಿ ಹೇಳಿದ್ದಾನೆ. ಇದರಿಂದಾಗಿ ವಿದ್ಯುತ್ ನಿಗಮದ ಸಿಬ್ಬಂದಿಗೆ ಸಮಸ್ಯೆ ಎಲ್ಲಿ ಎಂದು ತಿಳಿಯಿತು.
ಕೂಡಲೇ ಕಾರ್ಯ ಪ್ರವೃತ್ತರಾದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಆರೋಪಿ ಯುವಕನನ್ನು ಅರೆಸ್ಟ್ ಮಾಡಿ ವಿಚಾರಣೆ ನಡೆಸಿದ್ದಾರೆ. ರಾತ್ರಿ 8 ಗಂಟೆಯ ಹೊತ್ತಿಗೆ, ಕೆಎಸ್ಇಬಿ ಎಲ್ಲಾ ಟ್ರಾನ್ಸಫಾರ್ಮರ್ ಗಳ ಪ್ಯೂಸ್ ನ್ನು ಮರುಸ್ಥಾಪಿಸಿ ಸಮಸ್ಯೆಯನ್ನು ಸರಿಮಾಡಿದೆ. ಬಹುತೇಕ ಇತಿಹಾಸದಲ್ಲೇ ಈ ರೀತಿ ಯಾರೂ ಕೂಡ ಮಾಡಿರುವ ಸಾದ್ಯವಿಲ್ಲ ಎಂದು ಸಿಬ್ಬಂದಿ ಹೇಳಿದ್ದಾರೆ.
































