ಗದಗ: ಮಾಜಿ ಪ್ರಿಯಕರನ (Ex lover) ಕಿರುಕುಳದ (Blackmail) ಹಿನ್ನೆಲೆಯಲ್ಲಿ, ಮದುವೆ ನಿಶ್ಚಯವಾಗಿದ್ದ ಯುವತಿಯೊಬ್ಬಳು ಡೆತ್ ನೋಟ್ (Death note) ಬರೆದಿಟ್ಟು ನೇಣು ಬಿಗಿದುಕೊಂಡು ಆತ್ಮಹತ್ಯೆ (Self harming) ಮಾಡಿಕೊಂಡ ಘಟನೆ ಗದಗದಲ್ಲಿ (Gadag news) ನಡೆದಿದೆ. ಗದಗ ತಾಲೂಕಿನ ಅಸುಂಡಿಯಲ್ಲಿ ಸಾಯಿರಾಬಾನು ನದಾಫ್ (29) ಎಂಬ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ನೋಟ್ ಬರೆದಿಟ್ಟು ಸಾಯಿರಾಬಾನು ಮನೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮೇ 8ರಂದು ಸಾಯಿರಾಬಾನು ಮದುವೆ ನಿಗದಿಯಾಗಿತ್ತು.
ಮೈಲಾರಿ ಎಂಬ ಯುವಕನ ಕಿರುಕುಳಕ್ಕೆ ಬೇಸತ್ತು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮದುವೆ ಸಂಭ್ರಮದಲ್ಲಿದ್ದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಘಟನೆ ನಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 5 ವರ್ಷಗಳ ಹಿಂದೆ ಮೈಲಾರಿ ಎಂಬ ಯುವಕನ ಜೊತೆ ಈಕೆಗೆ ಲವ್ ಆಗಿ ಬ್ರೇಕಪ್ ಆಗಿತ್ತು. ನಂತರ ಮೈಲಾರಿ ತನ್ನನ್ನು ಮದುವೆ ಆಗಲು ಕಿರುಕುಳ ನೀಡುತ್ತಿದ್ದ. ನನ್ನನ್ನು ಮದುವೆ ಆಗದೇ ಇದ್ದರೆ ನನ್ನ ಜೊತೆ ಇರುವ ನಿನ್ನ ಫೋಟೋ, ವೀಡಿಯೋ ವೈರಲ್ ಮಾಡುತ್ತೇನೆ ಎಂದು ಈತ ಬೆದರಿಕೆ ಹಾಕಿದ್ದ.