ನಿಮ್ಮ ಆಧಾರ್ ಬಳಸಿ 50,000 ರೂ.ಗಳವರೆಗೆ ಸಾಲ ಪಡೆಯುವ ಸಾಧ್ಯತೆ ಇದೆ.
ಹೌದು, ಭಾರತ ಸರ್ಕಾರ ಸಾಲ ಪಡೆಯಲು ವಿಶೇಷ ಯೋಜನೆಯನ್ನ ಪರಿಚಯಿಸಿದೆ. ಪ್ರಧಾನ ಮಂತ್ರಿ ಸ್ವನಿಧಿ ಯೋಜನೆ ಅಡಿಯಲ್ಲಿ ಈ ವಿಶೇಷ ಸಾಲ ಸೌಲಭವನ್ನು ಒದಗಿಸುತ್ತಿದೆ.
ಸಣ್ಣ ಮತ್ತು ಸೂಕ್ಷ್ಮ ವ್ಯವಹಾರಗಳನ್ನ ಪ್ರಾರಂಭಿಸಲು ಬಯಸುವ ಜನರಿಗೆ ಇದು ಬಹಳ ಸಹಾಯವಾಗಲಿದೆ. ಆಧಾರ್ ವಿವರಗಳೊಂದಿಗೆ ಯಾವುದೇ ಸಾರ್ವಜನಿಕ ವಲಯದ ಬ್ಯಾಂಕಿಗಳಿಂದ ಈ ಸೌಲಭ್ಯ ಪಡೆಯಬಹುದು.