ಕೆಲಸದ ಸ್ಥಳದಲ್ಲಿ ಎಸಿ ಸಾಮಾನ್ಯ! ಕೆಲವರು ಮಲಗುವಾಗಲೂ ಎಸಿಯನ್ನು ಹಚ್ಚಿಕೊಂಡು ಮಲಗುತ್ತಾರೆ.
ಆದಾಗ್ಯೂ, ನಿಯಮಿತವಾಗಿ ಎಸಿಯಲ್ಲಿ ಮಲಗುವುದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
ಒಣ ಕಣ್ಣು, ನಿರ್ಜಲೀಕರಣ, ಒಣ ತ್ವಚೆ, ತಲೆನೋವು, ಉಸಿರಾಟದ ತೊಂದರೆ ಉಂಟಾಗುತ್ತದೆ.
ಮುಖ್ಯವಾಗಿ ಎಸಿಗಳನ್ನು ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಅವು ಬ್ಯಾಕ್ಟೀರಿಯಾ, ವೈರಸ್ ಮತ್ತು ಶಿಲೀಂದ್ರಗಳನ್ನು ಹರಡುತ್ತವೆ.
ಇವು ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿರುತ್ತದೆ.