ಮುಂಬೈ: ಕಾರ್ಯಕ್ರಮಕ್ಕೆ ಆಡಿಷನ್ ನೀಡಲು ತೆರಳುತ್ತಿದ್ದ ವೇಳೆ ಜೋಗೇಶ್ವರಿ ಹೆದ್ದಾರಿಯಲ್ಲಿ ಅವರ ಬೈಕಿಗೆ ಟ್ರಕ್ ಡಿಕ್ಕಿ ಹೊಡೆದು ‘ಧರ್ತಿಪುತ್ರ ನಂದಿನಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡಿ ಜನ ಮನ ಗೆದ್ದಿದ್ದ ಅಮನ್ ಜೈಸ್ವಾಲ್ ರಸ್ತೆ ಅಪಘಾತದಲ್ಲಿ ಶುಕ್ರವಾರ(ಜ.17) ಮೃತಪಟ್ಟಿದ್ದಾರೆ.
ಅಮನ್ ಜೈಸ್ವಾಲ್ ಉತ್ತರ ಪ್ರದೇಶದ ಬಲ್ಲಿಯಾ ನಿವಾಸಿಯಾಗಿದ್ದು. ‘ಧರ್ತಿಪುತ್ರ ನಂದಿನಿ’ ಧಾರಾವಾಹಿಯಲ್ಲಿ ಅಮನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಲ್ಲದೆ 2021 ರಲ್ಲಿ ಸೋನಿ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಪುಣ್ಯಶ್ಲೋಕ ಅಹಲ್ಯಾಬಾಯಿ’ ಕಾರ್ಯಕ್ರಮದಲ್ಲಿ ಯಶವಂತ್ ರಾವ್ ಪಾತ್ರದಲ್ಲಿ ಅಮನ್ ಕಾಣಿಸಿಕೊಂಡಿದ್ದರು. ಅಮನ್ ಮಾಡೆಲಿಂಗ್ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.