ಚೆನ್ನೈ : ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ(ಟಿವಿಕೆ)ಯು ಎಐಎಡಿಂಕೆ ಜತೆ ಮೈತ್ರಿ ಮಾಡಿಕೊಳ್ಳುತ್ತಿಲ್ಲ ಎಂಬುದನ್ನು ಪಕ್ಷ ಸ್ಪಷ್ಟಪಡಿಸಿದೆ.
2026ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಎಐಎಡಿಎಂಕೆ ಜತೆಗಿನ ಮೈತ್ರಿ ಬಗೆಗಿನ ಊಹಾಪೋಹಗಳಿಗೆ ಈಗ ತೆರೆ ಎಳೆಯಲಾಗಿದೆ.
ವಿಜಯ್ ತಮ್ಮ ಪಕ್ಷದ ಪ್ರಾರಂಭೋತ್ಸವದಂದು ಡಿಎಂಕೆ ತಮ್ಮ ರಾಜಕೀಯ ಎದುರಾಳಿಯಾದರೆ ಬಿಜೆಪಿ ಸೈದ್ಧಾಂತಿಕ ಎದುರಾಳಿ ಎಂದು ಘೋಷಿಸಿದ್ದರು. ಆದರೆ ಹಾಗಾದರೆ ಎಐಎಡಿಎಂಕೆ ಜತೆಗೆ ಮೈತ್ರಿ ಮಾಡಿಕೊಳ್ಳಬಹುದು ಎನ್ನುವ ಅಂತೆ ಕಂತೆಗಳು ಶುರುವಾಗಿದ್ದವು. ಇದೀಗ ಈ ಕುರಿತು ತಮಿಳಗ ವೆಟ್ರಿ ಕಳಗಂ ಸ್ಪಷ್ಟನೆ ಕೊಟ್ಟಿದ್ದು, ಇದು ಸತ್ಯಕ್ಕೆ ದೂರವಾದದು.
ಪಕ್ಷದ ಪ್ರಧಾನ ಕಾರ್ಯದರ್ಶಿ ಆನಂದ್ ಮಾತನಾಡಿ, ಸಾರ್ವಜನಿಕರು ಇಂತಹ ಸುದ್ದಿಗಳನ್ನು ನಿರ್ಲಕ್ಷಿಸಬೇಕೆಂದು ಒತ್ತಾಯಿಸಿದ ಅವರು, 2026 ರ ವಿಧಾನಸಭಾ ಚುನಾವಣೆಗೆ ಪಕ್ಷವು ತಯಾರಿ ನಡೆಸುತ್ತಿದೆ, ನಿರ್ಣಾಯಕ ಗೆಲುವು ಸಾಧಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.