ಚಿತ್ರದುರ್ಗ: ಮಾತೃಭಾಷೆಯನ್ನು ಮರೆತರೆ ತಾಯಿಯನ್ನೇ ಮರೆತಂತೆ ಎಂದು ಚಲನಚಿತ್ರ ನಟ ದೊಡ್ಡಣ್ಣ ಅಭಿಪ್ರಾಯ ಪಟ್ಟರು.
ನಗರದ ಸರಸ್ವತಿ ಕಾನೂನು ಕಾಲೇಜಿನಲ್ಲಿ ಎರಡು ದಿನಗಳ ಕಾಲ ಹಮ್ಮಿಕೊಂಡಿದ್ದ ಕಾನೂನು ಹಬ್ಬ ಆಚ ರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಕನ್ನಡ ಭಾಷೆ ಯ ಮಹತ್ವ ಮತ್ತು ಕನ್ನಡ ಭಾಷೆಯ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರಲ್ಲದೇ ಪೌರಾಣಿಕ, ಮಹಾಭಾರತ ಹಾಗೂ ಮಂಕು ತಿಮ್ಮನ ಕಗ್ಗಗಳ ವಿಷಯಗಳನ್ನು ತಿಳಿಸಿ ಕೊಟ್ಟರು.
ಸರಸ್ವತಿ ವಿದ್ಯಾಸಂಸ್ಥೆಯ ಅಧ್ಯಕ್ಷ ಹಾಗೂ ರಾಜ್ಯಸಭಾ ಮಾಜಿ ಸದಸ್ಯ ಎಚ್. ಹನುಮಂತಪ್ಪ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಸರಸ್ವತಿ ವಿದ್ಯಾ ಸಂಸ್ಥೆಯ ಉಪಾಧ್ಯಕ್ಷ ಫಾತ್ಯರಾಜನ್. ಹಾಗೂ ಕಾರ್ಯದರ್ಶಿ ಶ್ರೀಮತಿ ಡಿ.ಕೆ. ಶೀಲಾ ಹಾಗೂ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಡಾ. ಎಂ.ಎಸ್. ಸುಧಾದೇವಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕ ಹಾಗೂ ಐಕ್ಯೂಎಸಿ ಕೋ ಆರ್ಡಿನೇಟರ್ ಡಾ. ಎನ್.ಡಿ. ಗೌಡ, ವಿದ್ಯಾರ್ಥಿ ಕಾನೂನು ವೇದಿಕೆ ಗೌರವಾ ಧ್ಯಕ್ಷ ಎಲ್. ಶ್ರೀಶೈಲಾ, ಸಹಾಯಕ ಪ್ರಾಧ್ಯಾಪಕ ಹಾಗೂ ವಿದ್ಯಾರ್ಥಿ ಕಾನೂನು ವೇದಿಕೆಯ ಅಧ್ಯಕ್ಷ ಡಾ. ಎಸ್. ರವಿ, ಕಾರ್ಯದರ್ಶಿ ಸಿ. ವೆಂಕಣ್ಣ ವೇದಿಕೆಯ ಮೇಲೆ ಉಪಸ್ಥಿತ ರಿದ್ದರು.
ಕಾನೂನು ಹಬ್ಬದಲ್ಲಿ ವಿವಿಧ ರೀತಿಯ ಸಾಂಸ್ಕೃತಿಕ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಸಂಗೀತ, ನೃತ್ಯ, ಚರ್ಚಾ ಸ್ಪರ್ಧೆ, ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆ…. ಹೀಗೆ ಹತ್ತು ಹಲವು ರೀತಿಯ ಸ್ಪರ್ಧೆಗಳನ್ನು ಏರ್ಪ ಡಿಸಲಾಗಿತ್ತು. ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ಕೊನೆಯ ದಿನದ ಕಾರ್ಯಕ್ರಮದಲ್ಲಿ ಬಹುಮಾನ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಪ್ರಾರ್ಥನೆಯನ್ನು ವಿಭಿನ್ನ ರೀತಿಯಲ್ಲಿ ವೀಣವಾದನ ದೊಂದಿಗೆ ಕು|| ಭೂಮಿಕಾ ಜಿ.ಆರ್., ನೆರವೇರಿಸಿದರು. ಕು|| ಹೀನ ಕೌಸರ್. ಎಂ.ಎಸ್., ಸ್ವಾಗತಿಸಿದರು. ಎಸ್. ಉದಯ್ ಪ್ರಾಣೇಶ್ ಶರ್ಮ. ವಂದಿ ಸಿದರು, ಕು|| ಬಿ.ಸಿ. ಮೇಘನಾ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಎಲ್ಲಾ ಬೋಧಕ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.