ಬೆಂಗಳೂರು: ಬೆಂಗಳೂರಿನಲ್ಲಿ ನಟ ಮಯೂರ್ ಪಟೇಲ್ ರಿಂದ ಸರಣಿ ಅಪಘಾತ ಸಂಭವಿಸಿದೆ. ಫಾರ್ಚೂನರ್ ಕಾರ್ ಚಲಾಯಿಸುತ್ತಿದ್ದ ನಟ ಮಯೂರ್ ಪಟೇಲ್ ಕುಡಿದ ಮತ್ತಿನಲ್ಲಿ ನಿಂತಿದ್ದ ಕಾರ್ ಗಳಿಗೆ ಡಿಕ್ಕಿ ಹೊಡೆಸಿದ್ದಾರೆ.
ರಾತ್ರಿ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆಯ ಬಳಿ ಘಟನೆ ನಡೆದಿದೆ. ಮಯೂರ್ ಕಾರ್ ಡಿಕ್ಕಿ ಹೊಡೆದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್ ಎಂಬುವರ ಕಾರ್ ಗಳು ಮತ್ತು ಸರ್ಕಾರಿ ವಾಹನ ಜಖಂ ಆಗಿವೆ. ನಟ ಮಯೂರ್ ಪಟೇಲ್ ಕುಡಿದು ಅಪಘಾತ ಮಾಡಿದ್ದಾರೆ ಎನ್ನಲಾಗಿದೆ.
ಈ ವೇಳೆ ಪೊಲೀಸ್ ಕಂಟ್ರೋಲ್ ರೂಮ್ ಗೆ ಕಾರ್ ಚಾಲಕ ಕರೆ ಮಾಡಿದ್ದಾರೆ. ಮಯೂರ್ ಪಟೇಲ್ ರನ್ನು ಹೊಯ್ಸಳ ಪೊಲೀಸರು ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆಯ ವೇಳೆ ಕುಡಿದು ವಾಹನ ಚಾಲನೆ ಮಾಡಿರುವುದು ಸಾಬೀತಾಗಿದೆ. ಅಪಘಾತದ ಕುರಿತು ಕಾರ್ ಮಾಲಿಕ ಶ್ರೀನಿವಾಸ್ ದೂರು ನೀಡಿದ್ದಾರೆ. ಶ್ರೀನಿವಾಸ್ ದೂರಿನ ಮೇರೆಗೆ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಯೂರ್ ಪಟೇಲ್ ಕಾರ್ ಗೆ ವಿಮೆ ಇಲ್ಲದಿರುವುದು ಪತ್ತೆ ಆಗಿದೆ.

































