ಮುಂಬೈ :ನಟ ಸಲ್ಮಾನ್ ಖಾನ್ ಅವರಿಗೆ ವಯಸ್ಸು ಈಗ 59 ವರ್ಷ. ಇಂದಿಗೂ ಅವರು ವಿವಾಹ ಆಗುವ ಬಗ್ಗೆ ಆಲೋಚಿಸಿಲ್ಲ. ಅವರು ಮದುವೆ ಆಗದಿರಲು ಕಾರಣ ಏನು ಎಂಬುದು ಕೂಡ ಅವರು ರಿವೀಲ್ ಮಾಡಿಲ್ಲ. ಈಗ ಈ ಬಗ್ಗೆ ಮಾತನಾಡಿದ್ದಾರೆ. ಡಿವೋರ್ಸ್ ಆಗುತ್ತದೆ ಎನ್ನುವ ಭಯಕ್ಕೆ ಸಲ್ಮಾನ್ ಖಾನ್ ಮದುವೆ ಆಗಿಲ್ಲವೇ ಎನ್ನುವ ಪ್ರಶ್ನೆ ಎದ್ದಿದೆ.
ಈಗ ‘ದಿ ಗ್ರೇಟ್ ಇಂಡಿಯನ್ ಕಪಿಲ್’ ಶೋನ ಮೂರನೇ ಸೀಸನ್ ಆರಂಭಿಸಿದೆ. ಈ ಶೋಗೆ ಸಲ್ಮಾನ್ ಖಾನ್ ಅವರು ತಮ್ಮ ಸೋದರ ಅಳಿಯಂದಿರಾದ ಅರ್ಹಾನ್, ನಿರ್ವಣ್ ಮತ್ತು ಅಯಾನ್ ಜೊತೆ ಆಗಮಿಸಿದ್ದಾರೆ. ಈ ಮೂಲಕ ಹೊಸ ಸೀಸನ್ನ ಮೊದಲ ಎಪಿಸೋಡ್ ಅದ್ದೂರಿಯಾಗಿ ಆರಂಭ ಆಗುತ್ತಿದೆ.
ದಂಪತಿಗಳ ಮಧ್ಯೆ ಏಕೆ ವಿಚ್ಛೇದನ ಆಗುತ್ತಿದೆ ಎನ್ನುವ ಬಗ್ಗೆ ಕಪಿಲ್ ಶರ್ಮಾ ಮಾತನಾಡಿದ್ದಾರೆ. ‘ಮೊದಲೆಲ್ಲ ತ್ಯಾಗ ಮಾಡುತ್ತಿದ್ದರು. ಇದರ ಜೊತೆ ಸಹಿಷ್ಣುತೆಯ ಮನೋಭಾವ ಇತ್ತು. ಅಚಾನಕ್ಕಾಗಿ ಒಂದು ಕಾಲು ಮತ್ತೊಬ್ಬರ ಮೇಲೆ ಬಿದ್ದರೆ ವಿಚ್ಛೇದನ ಉಂಟಾಗುತ್ತದೆ. ಗೊರಕೆ ಕೂಡ ದಂಪತಿ ಬೇರೆ ಆಗಲು ಕಾರಣ ಆಗಬಹುದು. ಸಣ್ಣ ತಪ್ಪು ತಿಳುವಳಿಕೆಯಿಂದ ಪತಿ-ಪತ್ನಿ ಬೇರೆ ಆಗಬಹುದು ಎಂದಿದ್ದಾರೆ ಅವರು.
ಸದ್ಯ ಸಲ್ಮಾನ್ ಖಾನ್ ಅವರ ಹೇಳಿಕೆಯನ್ನು ನಾನಾ ರೀತಿಯಲ್ಲಿ ಬಣ್ಣಿಸಲಾಗುತ್ತಿದೆ. ಅವರು ವಿಚ್ಛೇದನದ ಭಯಕ್ಕೆ ವಿವಾಹ ಆಗುತ್ತಿಲ್ಲವೇ ಎನ್ನುವ ಪ್ರಶ್ನೆ ಹುಟ್ಟಿ ಹಾಕಿದೆ.