ಹೊಸ ಕಲಾವಿದರಿಗೂ ಪ್ರೋತ್ಸಾಹ ನೀಡಿ: ನಟ ಶಿವರಾಜ ಕುಮಾರ್.!

WhatsApp
Telegram
Facebook
Twitter
LinkedIn

 

ಚಿತ್ರದುರ್ಗ: ನಮಗೆ ಪ್ರೋತ್ಸಾಹ ನಿಡಿದಂತೆ ಹೂಸ ಕಲಾವಿದರೂ ಸಹಾ ಅವರು ನಿರ್ಮಾಣ ಮಾಡಿದ ಚಿತ್ರಗಳನ್ನು ವಿಕ್ಷಣೆ ಮಾಡುವುದರ ಮೂಲಕ ಅವರಿಗೆ ಪ್ರೋತ್ಸಾಹವನ್ನು ನೀಡುವಂತೆ ಕರುನಾಡ ಚಕ್ರವರ್ತಿ ಹ್ಯಾಟ್ರಿಕ್ ಹೀರೋ ಶಿವರಾಜ ಕುಮಾರ್ ಅಭೀಮಾನಿಗಳಲ್ಲಿ ಮನವಿ ಮಾಡಿದ್ದಾರೆ.

ಚಿತ್ರದುರ್ಗದ ನಗರದ ಪ್ರಸನ್ನ ಚಿತ್ರಮಂದಿರದಲ್ಲಿ ಅವರು ನಟಿಸಿದ “ಭೈರತಿ ರಣಗಲ್” ಚಿತ್ರ ತೆರೆ ಕಂಡಿದ್ದು ಅಭೀಮಾನಿಗಳಿಂದಲೂ ಸಹಾ ಉತ್ತಮವಾದ ಪ್ರೋತ್ಸಾಹ ಸಿಕ್ಕಿದೆ ಈ ಹಿನ್ನಲೆಯಲ್ಲಿ ಚಿತ್ರ ಪ್ರದರ್ಶನವಾಗುತ್ತಿರುವ ಚಿತ್ರಮಂದಿರಗಳಿಗೆ ಭೇಟಿಯನ್ನು ನೀಡುವ ಸಲುವಾಗಿ ಚಿತ್ರದುರ್ಗ ನಗರಕ್ಕೆ ಪತ್ನಿ ಶ್ರೀಮತಿ ಗೀತಾ ಶಿವರಾಜ ಕುಮಾರ್ ಜೊತೆಯಾಗಿ ಆಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ3-4 ದಶಕಗಳಿಂದ ನಮಗೆ ಆಭೀಮಾನಿಗಳು ಚಿತ್ರವನ್ನು ವೀಕ್ಷಣೆ ಮಾಡುವುದರ ಮೂಲಕ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ, ಇತ್ತೀಚಿನ ದಿನಮಾನದಲ್ಲಿ ಪ್ರೇಕ್ಷಕರು ಚಲನ ಚಿತ್ರ ಮಂದಿರÀಕ್ಕೆ ಬರುವುದು ಕಡಿಮೆಯಾಗಿತ್ತು ಆದರೆ ಇತ್ತೀಚಿನ ದಿನದಲ್ಲಿ ಉತ್ತಮವಾದ ಚಿತ್ರಗಳು ತೆರೆ ಕಾಣುತ್ತಿರುವುದರಿಂದ ಪ್ರೇಕ್ಷಕರು ಚಿತ್ರ ಮಂದಿರದತ್ತ ಕಾಲು ಹಾಕುತ್ತಿದ್ದಾರೆ. ಉತ್ತಮವಾದ ಚಿತ್ರಗಳನ್ನು ನೀಡಿದರೆ ಪ್ರೇಕ್ಷಕರು ಬರುತ್ತಾರೆ ಎಂಬ ನಂಬಿಕೆ ನನಗೆ ಇದೆ ಎಂದರು.

ಅಪ್ಪು ನಮ್ಮೆಲ್ಲರಲ್ಲು ಇದ್ದಾನೆ ಅಪ್ಪುನನ್ನ ನೆನೆಸಿಕೊಂಡ ದಿನಗಳೆ ಇಲ್ಲ. ಅವನನ್ನ ನೆನೆಸಿಕೊಳ್ಳದಿದ್ದರೆ ನಾನು ಅಣ್ಣನೆ ಆಗುವುದಿಲ್ಲ. ಅಪ್ಪುನನ್ನ ನೆನೆಸಿಕೊಳ್ಳಲು ಯಾವಾಗ ಆದರು ಸರಿ ಅಪ್ಪು ನನ್ನೊಳಗೆ ಇರಬೇಕಾದೆ ನೆನೆಸಿಕೊಳ್ಳುವ ಅವಶ್ಯಕತೆಯೇ ಇಲ್ಲ. ಇನ್ನೂ ನಿಮ್ಮಲ್ಲಿ ನನ್ನಲ್ಲಿ ಇಂಡಸ್ಟ್ರೀಯಲ್ಲೆ ಅಪ್ಪು ಇದ್ದು ಅವನನ್ನ ಹೇಗೆ ಇಟ್ಟುಕೊಂಡು ನಾವು ಬಾಳುತ್ತೇವೆ ಎಂಬುದೆ ಜೀವನವಾಗಿದ್ದು ಅಪ್ಪು ಎಲ್ಲೂ ಹೋಗಿಲ್ಲ ಇಲ್ಲೆ ಇದ್ದು ಅವನ ಕಣ್ಣುಗಳು ಇನ್ನೂ ಜಗತ್ತನ್ನ ನೋಡುತ್ತಿದ್ದು ಅಪ್ಪು ಎಲ್ಲೂ ಹೋಗಿಲ್ಲ ನಮ್ಮಲ್ಲೆ ಇದ್ದಾನೆ ಎಂದು ಶಿವಣ್ಣ ಹೇಳಿದ್ದಾರೆ

ಇತ್ತೀಚಿನ ದಿನಮಾನದಲ್ಲಿ ಚಿತ್ರರಂಗಕ್ಕೆ ಹೊಸಬರ ಪ್ರವೇಶ ಹೆಚ್ಚಿನ ರೀತಿಯಲ್ಲಿ ಆಗುತ್ತಿದೆ. ಅವರು ಸಹಾ ಪ್ರೇಕ್ಷಕರ ಮುಂದೆ ಹೀರೋ ಆಗಲು ಪ್ರಯತ್ನ ಮಾಡುತ್ತಿದ್ದಾರೆ ನಮ್ಮ ಚಿತ್ರಗಳನ್ನು ನೋಡಿ ಪೋತ್ಸಾಹ ನೀಡಿದಂತೆ ಅವರ ಚಿತ್ರಗಳನ್ನು ವಿಕ್ಷಣೆ ಮಾಡುವುದರ ಮೂಲಕ ನಮ್ಮಂತೆ ಅವರಿಗೂ ಸಹಾ ಪ್ರೋತ್ಸಾಹವನ್ನು ನೀಡಬೇಕಿದೆ. ನಾವುಗಳು ಚಿತ್ರವನ್ನು ಮಾಡುವುದರಿಂದ ಸಾವಿರಾರು ಕುಟುಂಬಗಳು ಜೀವನವನ್ನು ನಡೆಸುತ್ತಿವೆ. “ಭೈರತಿ ರಣಗಲ್” ಚಿತ್ರ ಉತ್ತಮವಾಗಿದೆ ಅಲ್ಲದೆ ಉತ್ತಮವಾದ ಕಥೆಯನ್ನು ಸಹಾ ಹೊಂದಿದೆ ನೋಡುವ ಪ್ರೇಕ್ಷಕರನ್ನು ಕುತೂಹಲದಲ್ಲಿ ಇಡುತ್ತದೆ. ಇದ್ದಲ್ಲದೆ ಮುಂದಿನ ದಿನದಲ್ಲಿ ಇದರ ಭಾಗ 2 ಸಹಾ ಬರುವ ನಿರೀಕ್ಷೆ ಇದೆ ಎಂದರು.

ಈಸೂರು ದಂಗೆ ಕುರಿತು ಸಿನಿಮಾ ಮಾಡಬೇಕು. ಈ ಕಥೆ ಚೆನ್ನಾಗಿದೆ ಎಂದು ಹೇಳಿದರು.ಈಸೂರು ದಂಗೆ ಸಿನಿಮಾ ಖಂಡಿತ ಮಾಡೇ ಮಾಡ್ತಿವಿ. ಕಥೆ ತುಂಬಾ ಸೂಕ್ಷ್ಮ ಆಗಿರುವುದರಿಂದ ಸಾಕಷ್ಟು ಎಚ್ಚರಿಕೆ ವಹಿಸಿ ಸಿನಿಮಾ ಮಾಡಬೇಕು ಎಂದು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.ಮುಂದೆ 45 ಸಿನಿಮಾ ಬರುತ್ತಿದೆ. ಅದರಲ್ಲಿ ನಾನು, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಭಿನಯಿಸಿದ್ದೇವೆ. ಈ ಚಿತ್ರದನ್ನು ಶಿವಣ್ಣನ ಪಾತ್ರ ಭಿನ್ನವಾಗಿದೆ. ಇದು ಪ್ರೇಕ್ಷಕರಿಗೆ ಅಚ್ಚರಿ ಮೂಡಿಸಲಿದೆ. ಆನಂತರ ನಮ್ಮದೇ ಬ್ಯಾನರ್ನಲ್ಲಿ ಎ ಫಾರ್ ಆನಂದ ಸಿನಿಮಾ ಮೂಡಿ ಬರಲಿದೆ. ಇದು ನನ್ನ ಹಾಗೂ ಮಕ್ಕಳ ನಡುವೆ ನಡೆಯುವ ಸಂಭಾಷಣೆಯ ವಿಭಿನ್ನ ಶೈಲಿಯ ಚಿತ್ರ. ಹೊಸತನವಿದೆ ಎಂದು ವಿವರಿಸಿದರು.

 

ಭೈರತಿ ರಣಗಲ್ ಯಶಸ್ವಿಯಾಗಿ ನಡೆಯುತ್ತಿದೆ. ಜನ ಚಿತ್ರಮಂದಿರಕ್ಕೆ ಬರುತ್ತಿಲ್ಲ ಎನ್ನುವ ಅಪವಾದ ಇತ್ತು. ಆದರೆ, ಜನ ಬರುತ್ತಿದ್ದಾರೆ. ಅಮೇರಿಕಾದಲ್ಲೂ ಎರಡನೇ ವಾರ ಚಿತ್ರ ನಡೆಯುತ್ತಿದೆ. ದುಬೈನಲ್ಲೂ ರಿಲೀಸ್ ಆಗಿದೆ. ಮುಂದಿನ ವಾರ ತೆಲುಗು, ತಮಿಳು ಸೇರಿದಂತೆ ಎಲ್ಲ ಕಡೆಗಳಲ್ಲಿ ಚಿತ್ರ ಬರಲಿದೆ ಎಂದರು. ಮಫ್ತಿ-2 ತೆರೆಗೆ ಬರುವ ನಿರೀಕ್ಷೆ ಇದೆ. ಭೈರತಿ ರಣಗಲ್ ಮೊದಲು ಬಂದು ಮಫ್ತಿಯಲ್ಲಿ, ಮಫ್ತಿಯಲ್ಲಿ ಮುಗಿಯಲಿದೆ. ಭೈರತಿ ರಣಗಲ್ ಹಾಗೂ ಮಫ್ತಿ ಸರಣಿ ಕಥೆಗಳು ಎಂದು ಹೇಳಿದ ಅವರು. ಈ ವರ್ಷ ಕನ್ನಡದಲ್ಲಿ ಉತ್ತಮ ಚಿತ್ರಗಳು ತೆರೆಗೆ ಬಂದಿವೆ. ಭೀಮ, ಭಗೀರ, ಭೈರತಿ ರಣಗಲ್, ಕೃಷ್ಣಂ ಪ್ರಣಯ ಸಖಿ ರೀತಿಯ ಒಳ್ಳೆಯ ಕಥೆಗಳು ಬಂದಿವೆ. ಹೀಗಾಗಿ ಚಿತ್ರಮಂದಿರಕ್ಕೆ ಜನ ಬರುತ್ತಿದ್ದಾರೆ. ಚಿತ್ರ ಯಶಸ್ವಿಯಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಚಿತ್ರದುರ್ಗದಿಂದ ಪ್ರವಾಸ ಆರಂಭಿಸಿದ್ದೇವೆ. ನಾಳೆ ದಾವಣಗೆರೆ, ಶಿರಸಿ, ಶಿವಮೊಗ್ಗ, ರಾಣೆಬೆನ್ನೂರು ಹಾಗೂ ಹುಬ್ಬಳ್ಳಿಗೆ ಪ್ರವಾಸ ಮಾಡಿ ಅಭಿಮಾನಿಗಳನ್ನು ಮಾತನಾಡಿಸಲಿದ್ದೇವೆ ಎಂದರು.

ಈ ಸಂದರ್ಭದಲ್ಲಿ ಹಾಜರಿದ್ದ ನಗರಸಭೆಯ ಮಾಜಿ ಅಧ್ಯಕ್ಷರಾದ ಬಿ.ಕಾಂತರಾಜ್ ಶಿವರಾಜ್ ಕುಮಾರ್ ನಮಗೆಲ್ಲಾ ಅಣ್ಣ ಇದ್ದಂತೆ ಅವರು ಬರೀ ಸಿನಿಮಾದಲ್ಲಿ ಕೆಲಸ ಮಾಡುವುದನ್ನು ಮಾತ್ರ ಮಾಡುತ್ತಿದ್ದಾರೆ ತಮ್ಮ ಆರೋಗ್ಯ ಕಡೆಗೆ ಗಮನ ನೀಡುತ್ತಿಲ್ಲ ಇನ್ನೂ ಮುಂದಾದರೂ ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಿದೆ, ವರ್ಷದ 365 ಸದಿನವೂ ಸಹಾ ಚಿತ್ರರಂಗಕ್ಕೆ ದುಡಿಯವ ಬದಲು ವರ್ಷದಲ್ಲಿ 1 ಅಥವಾ 2 ಚಿತ್ರಗಳನ್ನು ಮಾಡುವುದರ ಮೂಲಕ ಅಭೀಮಾನಿಗಳನ್ನು ಸಂತೋಷಿಸಬೇಕಿದೆ ಚಲನಚಿತ್ರ ರಂಗಕ್ಕಿಂತ ನಿಮ್ಮ ಆರೋಗ್ಯದ ಬಗ್ಗೆ ಗಮನ ನೀಡಿದ ಇದರ ಬಗ್ಗೆ ಆವರ ಪತ್ನಿ ಗೀತಾಕ್ಕ ಸಹಾ ಗಮನ ನೀಡಬೇಕೆಂದು ಮನವಿ ಮಾಡಿದರು.

ಇಂದು ಚಿತ್ರದುರ್ಗದ ಪ್ರಸನ್ನ ಚಿತ್ರಮಂದಿರಕ್ಕೆ ಆಗಮಿಸಿದ್ದ ನಟ ಶಿವಣ್ಣ ಅಭಿಮಾನಿಗಳನ್ನು ಕಂಡು ಖುಷಿಯಾದರು. ಇತ್ತ ಶಿವಣ್ಣನನ್ನು ಕಂಡ ತಕ್ಷಣ ನೆರೆದಿದ್ದ ಸಾವಿರಾರು ಅಭಿಮಾನಿಗಳು, ಶಿಳ್ಳೆ, ಕೇಕೆ, ಚಪ್ಪಾಳೆ ಹಾಕಿ ಸಂಭ್ರಮಿಸಿದರು. ಚಿತ್ರಮಂದಿರದ ಎದುರು ಬೃಹತ್ ಹಾರ ಹಾಕಿದ ಅಭಿಮಾನಿಗಳು, ಶಿವಣ್ಣನ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.

ಈ ಸಮಯದಲ್ಲಿ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಗೋಪಾಲಸ್ವಾಮಿ ನಾಯಕ್, ಪ್ರಸನ್ನ ಚಲನಚಿತ್ರ ಮಂದಿರದ ಮಾಲಿಕರಾದ ಪ್ರಜ್ವಲ್, ಟಿಪ್ಪು ಖಾಸಿಂ ಆಲಿ ಸೇರಿದಂತೆ ಆಪಾರ ಸಂಖ್ಯೆಯಲ್ಲಿ ಅಭೀಮಾನಿಗಳು ಭಾಗವಹಿಸಿದ್ದರು.

BC Suddi   About Us
BC Suddi Bcsuddi is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World. Read More
For Feedback - [email protected]

Related News

LATEST Post

WhatsApp

Don’t Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.

Powered By KhushiHost

WhatsApp Icon Telegram Icon