ಬೆಂಗಳೂರು : ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯಲು ಇಂದು ಸಂಜೆ ಅಮೆರಿಕಕ್ಕೆ ನಟ ಶಿವಣ್ಣ ಪ್ರಯಾಣ ಬೆಳೆಸಲಿದ್ದಾರೆ. ಹೌದು, ಇಂದು ಪತ್ನಿ ಗೀತಾ ಶಿವರಾಜ್ ಕುಮಾರ್ , ಪುತ್ರಿ ನಿವೇದಿತಾ ಹಾಗೂ ಆಪ್ತರ ಜೊತೆ ಅಮೆರಿಕಕ್ಕೆ ನಟ ಶಿವರಾಜ್ ಕುಮಾರ್ ಪ್ರಯಾಣ ಬೆಳೆಸಲಿದ್ದಾರೆ.
ಡಿ.24 ರಂದು ಶಿವಣ್ಣಗೆ ಸರ್ಜರಿ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿದೆ. ಹೀಗಾಗಿ ಇಂದು ರಾತ್ರಿ 8:30 ರ ವೇಳೆಗೆ ವಿಮಾನ ಏರಲಿದ್ದಾರೆ. ನಾಳೆ ಶಿವರಾಜ್ ಕುಮಾರ್ ಬಾಮೈದ ಮಧು ಬಂಗಾರಪ್ಪ ಕೂಡ ಅಮೆರಿಕಕ್ಕೆ ತೆರಳಲಿದ್ದಾರೆ.