ನಟ ಶಿವರಾಜ್ ಕುಮಾರ್ ಅನಾರೋಗ್ಯದ ಹಿನ್ನೆಲೆ ಚಿಕಿತ್ಸೆ ಪಡೆಯಲು ಅಮೆರಿಕಕ್ಕೆ ತೆರಳಿದ್ದು, ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ ಎಂದು ಮೂಲಗಳು ಮಾಹಿತಿ ನೀಡಿದೆ.
ಅಮೆರಿಕಾದ ಫ್ಲೋರಿಡಾದಲ್ಲಿರುವ ಮಿಯಾಮಿಯಲ್ಲಿ ಇಂದು ಶಿವರಾಜ್ ಕುಮಾರ್ ಅವರಿಗೆ ಸರ್ಜರಿ ನಡೆಯಲಿದೆ ಎಂದು ತಿಳಿದುಬಂದಿದೆ. ಇಂದು ಆಪರೇಷನ್ ಮಾಡಿಕೊಳ್ಳಲಿರುವ ಶಿವಣ್ಣ 30 ದಿನ ಅಲ್ಲೇ ವಿಶ್ರಾಂತಿ ಪಡೆದು ನಂತರ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ. ಶಿವಣ್ಣ ಸಂಪೂರ್ಣ ಗುಣಮುಖರಾಗಿ ಬರಲೆಂದು ಆಪ್ತರು ಹಾಗೂ ಅಭಿಮಾನಿ ಬಳಗ ವಿಶೇಷ ಪೂಜೆ-ಹೋಮ ಹವನ ನಡೆಸುತ್ತಿದೆ.
ಡಿ.18 ರಂದು ಪತ್ನಿ ಗೀತಾ ಶಿವರಾಜ್ ಕುಮಾರ್ , ಪುತ್ರಿ ನಿವೇದಿತಾ ಹಾಗೂ ಆಪ್ತರ ಜೊತೆ ಅಮೆರಿಕಕ್ಕೆ ನಟ ಶಿವರಾಜ್ ಕುಮಾರ್ ಪ್ರಯಾಣ ಬೆಳೆಸಿದ್ದರು.