ಬೆಂಗಳೂರು : ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರನ್ಯಾ ರಾವ್ ಫ್ಲಾಟ್ ಮೇಲೂ ಡಿಆರ್‌ಐ ಅಧಿಕಾರಿಗಳು ದಾಳಿ ನಡೆಸಿದ್ದು, ಕೋಟಿ ಕೋಟಿ ಮೌಲ್ಯದ ಚಿನ್ನವನ್ನು ವಶಪಡೆಸಿಕೊಂಡಿದ್ದಾರೆ.
ಲ್ಯಾವೆಲ್ಲಿ ರಸ್ತೆಯಲ್ಲಿನ ರನ್ಯಾ ರಾವ್ ಅವರ ಮನೆಯಲ್ಲಿದ್ದ 2.06 ಕೋಟಿ ಮೌಲ್ಯದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಮಂಗಳವಾರ ರಾತ್ರಿ ಡಿಆರ್‌ಐ ಅಧಿಕಾರಿಗಳು 2.67 ಕೋಟಿ ಹಣವನ್ನು ವಶಕ್ಕೆ ಪಡೆದಿದ್ದರು.
ನಂದವಾಣಿ ಮ್ಯಾನ್ಸನ್‌ನಲ್ಲಿ ವಾಸವಿದ್ದ ನಟಿ ತಿಂಗಳಿಗೆ 4.5 ಲಕ್ಷ ಬಾಡಿಗೆ ಕಟ್ಟುತ್ತಿದ್ದರು. ಇನ್ನು ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ನಿನ್ನೆ ಬಂಧನಕ್ಕೆ ಒಳಗಾಗಿದ್ದ ನಟಿ ರನ್ಯಾ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ