ಪರಪ್ಪನ ಅಗ್ರಹಾರದಲ್ಲಿ ಶಿಕ್ಷೆ ಗೊಳಗಾಗಿರುವ ರನ್ಯಾ ರಾವ್ಗೆ ಇನ್ನೊಂದು ಶಾಕಿಂಗ್ ನ್ಯೂಸ್ ದೊರಕಿದೆ. ಈ ಬಾರಿ ಇಡಿ ಅಧಿಕಾರಿಗಳು ದೊಡ್ಡ ಆಘಾತವನ್ನೇ ನೀಡಿದ್ದಾರೆ. ಅಕ್ರಮ ಚಿನ್ನ ಸಾಗಾಟ ಪ್ರಕರಣ ಸಂಬಂಧ ನಟಿಯ ಕೋಟಿ ಕೋಟಿ ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದಾರೆ.
ರನ್ಯಾ ರಾವ್ ದುಬೈನಿಂದ ಭಾರತಕ್ಕೆ ಚಿನ್ನ ಕಳ್ಳ ಸಾಗಣೆ ಮಾಡಿದ್ದ ಗ್ಯಾಂಗ್ನ ಹವಾಲ ದಂಧೆ ಹಾಗೂ ಇನ್ನಿತರ ವ್ಯವಹಾರ ಬಯಲಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಹ ಕೈದಿಗಳೊಂದಿಗೆ ಕಿರಿಕ್ ಮಾಡುತ್ತಿರುವ ಕುರಿತು ಇತ್ತೀಚೆಗೆ ವರದಿಯಾಗಿತ್ತು. ಇದೀಗ ಇ.ಡಿ.ಅಧಿಕಾರಿಗಳು ಚಿನ್ನ ಸಾಗಣೆ ಪ್ರಕರಣದಲ್ಲಿ ರನ್ಯಾಗೆ ಸೇರಿದ 34.12 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದಾರೆ.
ನಕಲಿ ದಾಖಲೆಗಳನ್ನು ಸೃಷ್ಟಿಸಿ ಚಿನ್ನ ಕಳ್ಳಸಾಗಣೆ ಮಾಡ್ತಿದ್ದ ರನ್ಯಾರಾವ್ ಹವಾಲಾ ದಂಧೆ ನಡೆಸುತ್ತಿರುವುದು ಇಡಿ ತನಿಖೆಯಲ್ಲಿ ದೃಢಪಟ್ಟಿದೆ. ಈ ಬೆನ್ನಲ್ಲೇ ಆಸ್ತಿ ಜಪ್ತಿ ಮಾಡಲಾಗಿದೆ.
ಯಾವೆಲ್ಲ ಆಸ್ತಿ ಜಪ್ತಿ ಮಾಡಲಾಗಿದೆ? ಇಲ್ಲಿದೆ ವಿವರ
ಬೆಂಗಳೂರು, ತುಮಕೂರಿನಲ್ಲಿರುವ ಸ್ಥಿರಾಸ್ತಿ ಮುಟ್ಟುಗೋಲು
ಬೆಂಗಳೂರಿನ ಅರ್ಕಾವತಿ ಲೇಔಟ್ನಲ್ಲಿರೋ ರನ್ಯಾ
ತುಮಕೂರಿನ ಕೈಗಾರಿಕಾ, ಆನೇಕಲ್ನ ಕೃಷಿ ಜಮೀನು ಜಪ್ತಿ
ಚಿನ್ನದ ಚೋರಿ ರನ್ಯಾ ರಾವ್ ಚಿನ್ನ ಕಳ್ಳ ಸಾಗಾಟ ಪ್ರಕರಣ
ಪಿಎಂಎಲ್ಎ ಕಾಯಿದೆಯಡಿ ಕೇಸ್ ಮಾಡಿ ತನಿಖೆ ನಡೆಸಿದ್ದ ಇಡಿ
34.12 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು