ಯುವ ನಟಿಯೊಬ್ಬರಿಗೆ ಆಡಿಷನ್ ನೆಪದಲ್ಲಿ, ಅವರ ಖಾಸಗಿ ವಿಡಿಯೋಗಳನ್ನು ಪಡೆದು ಸೋಷಿಯಲ್ ಮೀಡಿಯಾದಲ್ಲಿ ಲೀಕ್ ಮಾಡಲಾಗಿದೆ.
ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ 24ರ ಹರೆಯದ ಯುವ ನಟಿ ಶ್ರುತಿ ನಾರಾಯಣನ್ ಅವರೇ ವಂಚಕರ ಗ್ಯಾಂಗ್ ಬಲೆಗೆ ಬಿದ್ದವರು. ಈ ನಟಿಯ 14 ನಿಮಿಷಗಳ ಖಾಸಗಿ ವಿಡಿಯೋ, ಫೋಟೋ ತುಣುಕುಗಳೀಗ ಟ್ವಿಟ್ಟರ್ ಇನ್ಸ್ಟಾಗ್ರಾಂಗಳಲ್ಲಿ ಲೀಕ್ ಆಗಿದ್ದು, ಬಗೆ ಬಗೆ ಚರ್ಚೆ ಶುರುವಾಗಿದೆ.
ನಕಲಿ ಆಡಿಷನ್ ನೆಪದಲ್ಲಿ ನಟಿ ಶ್ರುತಿ ನಾರಾಯಣನ್ ಅವರನ್ನು ಸಂಪರ್ಕಿಸಿದ್ದ ಗ್ಯಾಂಗ್ವೊಂದು, ತಾವು ದೊಡ್ಡ ಬಜೆಟ್ನ ಸಿನಿಮಾ ಮಾಡುತ್ತಿದ್ದೇವೆ. ಆ ಚಿತ್ರದಲ್ಲಿ ನಿಮಗೂ ಒಂದು ಪಾತ್ರವನ್ನು ನೀಡಲಿದ್ದೇವೆ ಎಂದು ಫೋನ್ ಮೂಲಕ ನಟಿಯನ್ನು ಸಂಪರ್ಕಿಸಿದ್ದಾರೆ. ಬಳಿಕ ವಿಡಿಯೋ ಕಾಲ್ ಮೂಲಕವೇ ನಟಿಯನ್ನು ಆಡಿಷನ್ ಮಾಡಿದ್ದಾರೆ
ಶ್ರುತಿ, ಸದ್ಯ ತಮಿಳು ಸಿನಿಮಾರಂಗ ಮತ್ತು ತಮಿಳು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದಾರೆ. ತಮಿಳಿನ “ಸಿರಿಗಡಿಕ್ಕ ಆಸೈ” ಧಾರಾವಾಹಿಯಲ್ಲಿ ಪೋಷಕ ಪಾತ್ರದಲ್ಲಿದ್ದಾರೆ.
ಸ್ಕ್ರಿಪ್ಟ್ ಪ್ರಕಾರ ಕ್ಯಾಮರಾ ಮುಂದೆ ಒಂದಷ್ಟು ದೃಶ್ಯಗಳಲ್ಲಿ ನಟಿಸುವಂತೆ ಒತ್ತಾಯಿಸಿದ್ದಾರೆ. ಕೆಲ ಸಮಯದ ಬಳಿಕ ಕೆಲವು ವೆಬ್ಸೈಟ್ಗಳಲ್ಲಿ ಆ ವಿಡಿಯೋ ಕಾಣಿಸಿಕೊಳ್ಳುತ್ತಿದ್ದಂತೆ, ಇದೊಂದು ಫ್ರಾಡ್ ಆಡಿಷನ್ ಎಂದು ಶ್ರುತಿ ನಾರಾಯಣನ್ಗೂ ತಿಳಿದಿದೆ. ತಕ್ಷಣ, ಪೊಲೀಸರಿಗೆ ದೂರು ನೀಡಿದ್ದಾರೆ.