44ರ ಹರೆಯದಲ್ಲೂ 18ರ ಹುಡುಗಿಯಂತೆ ಮಿಂಚುತ್ತಿರುವ ನಟಿ ಶ್ವೇತಾ ತಿವಾರಿ.ಇಂದಿಗೂ ಅವರು ಅನೇಕ ಯುವ ನಟಿಯರನ್ನು ಮೀರಿಸುತ್ತಾರೆ. ಅವರನ್ನು ನೋಡಿದರೆ, ಅವರು ಎರಡು ಮಕ್ಕಳ ತಾಯಿ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಕಲೀರೀನ್’ ಸೀರಿಯಲ್ ಮೂಲಕ ನಟನೆಗೆ ಪಾದಾರ್ಪಣೆ ಮಾಡಿದ ಶ್ವೇತಾ ‘ಕಸೌತಿ ಜಿಂದಗಿ ಕೇ’ ಧಾರವಾಹಿಯ ಮೂಲಕ ಇವರ ಜನಪ್ರಿಯತೆ ಹೆಚ್ಚಿತ್ತು. ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುವ ಇವರು ತಮ್ಮ ಸ್ಟೈಲಿಶ್ ಆಗಿರುವ ಫೋಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
ಈ ಭಾರಿ ನಟಿ ಬೆಡ್‌ರೂಮ್ ಫೋಟೋಶೂಟ್‌ನ ಚಿತ್ರಗಳನ್ನು ಹಂಚಿಕೊಂಡಿದ್ದು, ಅವು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಈ ಫೋಟೋಗಳಲ್ಲಿ ಸಂತೋಷದಿಂದ ಕಾಣಿಸಿಕೊಂಡಿರುವ ಅವರು, ತಮ್ಮ ರಾತ್ರಿಯ ದಿನಚರಿಯ ಬಗ್ಗೆಯೂ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ದಣಿದ ದಿನದ ನಂತರ, ತನ್ನ ರಾತ್ರಿಯ ದಿನಚರಿ ಎಂದರೆ ಊಟ ಮಾಡುವುದು, ಓದುವುದು, ನಿದ್ದೆ ಮಾಡುವಂತೆ ನಟಿಸುವುದು ಮತ್ತು ಮತ್ತೆ ‘ಧುರಂಧರ್’ ನೋಡುವುದು ಎಂದು ಅವರು ಬರೆದಿದ್ದಾರೆ.
ಶ್ವೇತಾ ತಿವಾರಿ ಬೆಡ್‌ರೂಮ್‌ನಲ್ಲಿ ವಿಭಿನ್ನ ಲುಕ್‌ಗಳಲ್ಲಿ ಫೋಟೋಶೂಟ್ ಮಾಡಿಸಿಕೊಂಡಿದ್ದು, ಅವುಗಳನ್ನು ಹಂಚಿಕೊಂಡಿದ್ದಾರೆ. ಅವರು ಈ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಅವರ ಹ್ಯಾಪಿ ಮೂಡ್ ಚಿತ್ರಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಫೋಟೋಶೂಟ್‌ನಲ್ಲಿ ಶ್ವೇತಾ ತಿವಾರಿ ಫ್ರೆಶ್‌ನೆಶ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಮುಂದೆ ಅವರ ಆತ್ಮವಿಶ್ವಾಸ ಮತ್ತು ಸೌಂದರ್ಯ ಅಭಿಮಾನಿಗಳನ್ನು ಸೆಳೆದಿದೆ. ಈ ಫೋಟೋಗಳಲ್ಲಿ, ಅವರು ತಮ್ಮ ಸಮಯವನ್ನು ಆನಂದಿಸುತ್ತಿರುವುದನ್ನು ಕಾಣಬಹುದು.
https://www.instagram.com/p/DUPpSyTiHr8/?igsh=NjFocjZxMGZ2Z2J6 https://www.newsics.com/2026/02/04/three-sisters-commit-suicide-due-to-online-game-addiction/
































