ಬೆಂಗಳೂರು: ಚಂದ್ರಯಾನ-3 ಯಶಸ್ಸಿ ಆಗಿದೆ. ಭಾರತ ಮತ್ತೊಂದು ಸಾಧನೆ ಮಾಡಲು ಇಸ್ರೋ ಮುಂದಾಗಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದೇಶದ ಜನತೆಗೆ ಮತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ಚಂದ್ರಯಾನ ಸಕ್ಸಸ್ ಬೆನ್ನಲ್ಲೇ ಸೂರ್ಯಯಾನಕ್ಕೆ ಇಸ್ರೋ ತಯಾರಾಗಿದೆ. ಭಾಸ್ಕರನ ಅಧ್ಯಯನ ಮಾಡುವ ಉದ್ದೇಶದಿಂದ ಇಸ್ರೋ ಆದಿತ್ಯ ಎಲ್-1 ನೌಕೆಯನ್ನು ಇಂದು (ಸೆಪ್ಟೆಂಬರ್ 2) ರಂದು ಬೆಳಿಗ್ಗೆ 11.50ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಉಡಾವಣಾ ಕೇಂದ್ರದಿಂದ ಉಡಾವಣೆ ಮಾಡಲಿದೆ. ಈ ಮೂಲಕ ಮತ್ತೊಂದು ಇತಿಹಾಸ ಸೃಷ್ಟಿಸಲು ಇಸ್ರೋ ಹೊರಟಿದೆ.