ನವದೆಹಲಿ : ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಬೂಲ್‌ನಿಂದ ಬಂದ ಅರಿಯಾನಾ ಅಫ್ಘಾನ್ ವಿಮಾನವು ಟೇಕಾಫ್‌ಗಾಗಿ ಮೀಸಲಿಟ್ಟ ರನ್‌ವೇಯಲ್ಲಿ ಲ್ಯಾಂಡ್ ಆಗಿದೆ.
ಈ ವೇಳೆ ಟೇಕಾಫ್ ಆಗುವ ಯಾವುದೇ ವೀಮಾನ ಇರದ ಕಾರಣದಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಸಮನ್ವಯ ದೋಷಗಳ ಬಗ್ಗೆ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಕಾಬೂಲ್‌ನಿಂದ ಬಂದ FG 311 ವಿಮಾನ ಭಾನುವಾರ ಮಧ್ಯಾಹ್ನ 12:07ಕ್ಕೆ ರನ್‌ವೇ 29R ನಲ್ಲಿ ಇಳಿಯಿತು. ಅದೃಷ್ಟವಶಾತ್, ಆ ಸಮಯದಲ್ಲಿ ಯಾವುದೇ ವಿಮಾನ ಹಾರಲು ಸಿದ್ಧವಾಗಿರಲಿಲ್ಲ. ಇದರಿಂದಾಗಿ ದೊಡ್ಡ ಅನಾಹುತ ತಪ್ಪಿದೆ.
ಜೆಟ್ ವಿಮಾನವು ರನ್‌ವೇಯಲ್ಲಿ ತಪ್ಪಾಗಿ ಇಳಿದಿದೆಯೇ? ಅಥವಾ ವಾಯು ಸಂಚಾರ ನಿಯಂತ್ರಕರ ಸೂಚನೆಗಳ ಮೇರೆಗೆ ಲ್ಯಾಂಡ್ ಮಾಡಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
































