ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಹೆಬ್ಬರಿ ಗ್ರಾಮದ ಬಳಿಯಿರುವ ಫಾರ್ಮ್ ಒಂದರಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿದೆ.
ಯಾರ್ಕ್‌ಶೈರ್ ತಳಿಯ ಹಂದಿಗಳಿಗೆ ಆಫ್ರಿಕನ್ ಹಂದಿ ಜ್ವರ ದೃಢಪಟ್ಟಿದ್ದು, ಈಗಾಗಲೇ 100 ಹಂದಿಗಳು ಸಾವನ್ನಪ್ಪಿವೆ.
57 ಹಂದಿಗಳನ್ನು ಕೊಲ್ಲಲು ನಿರ್ಧರಿಸಲಾಗಿದೆ. ಹಂದಿ ಜ್ವರದ ಹರಡುವಿಕೆಯನ್ನು ತಡೆಯಲು, ನಾಳೆ (ಆಗಸ್ಟ್ 29) ಹೆಬ್ರಿ ಗ್ರಾಮದ ಫಾರ್ಮ್‌ನಲ್ಲಿರುವ ಉಳಿದ 57 ಹಂದಿಗಳನ್ನು ಕಲ್ಲಿಂಗ್ ಮಾಡಲು ನಿರ್ಧರಿಸಲಾಗಿದೆ ಎಂದು ಜಿಲ್ಲಾ ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ರಂಗಪ್ಪ ತಿಳಿಸಿದ್ದಾರೆ. ಫಾರ್ಮ್ ನಿಂದ ಹಂದಿಗಳ ಸಾಗಾಟ, ಮಾರಾಟ ನಿಷೇಧಿಸಲಾಗಿದೆ.
ಹಂದಿಗಳನ್ನು ಹೊಸಕೋಟೆಯ ಮೂಲಕ ನಾಗಾಲ್ಯಾಂಡ್ ಗೆ ರವಾನಿಸುತ್ತಿದ್ದರು. ಹಂದಿಗಳಿಗೆ ಆಫ್ರಿಕನ್ ಜ್ವರ ಹರಡುದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಸೋಂಕಿತ ಹಂದಿಗಳಿಂದ ಮನುಷ್ಯರಿಗೆ ರೋಗ ತಗುಲುವುದಿಲ್ಲ. ಆಫ್ರಿಕನ್ ಹಂದಿ ಜ್ವರದಿಂದ ಜನರಿಗೆ ಯಾವುದೇ ಆತಂಕ ಬೇಡ ಎಂದು ಹೇಳಿದ್ದಾರೆ