ಮದುವೆಯಾದ ಕೆಲವೇ ನಿಮಿಷಗಳಲ್ಲಿ ನವವಿವಾಹಿತೆಯೊಬ್ಬಳು ತನ್ನ ಪತಿಗೆ ಅಣ್ಣ ಎಂದು ಕರೆದು ಕೈ ಕೊಟ್ಟ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.
ವರನ ಬಳಿ ಹುಡುಗಿ ನನಗೆ ಈ ಮದುವೆ ಇಷ್ಟ ಇರಲಿಲ್ಲ ಒತ್ತಾಯಪೂರ್ವಕವಾಗಿ ತನಗೆ ಮದುವೆ ಮಾಡಲಾಗಿದೆ ಎಂದು ಹೇಳಿದ್ದಾಳೆ. ತನ್ನನ್ನು ಮನೆಗೆ ಕರೆದೊಯ್ದರೆ, ಸಹೋದರ ಸಹೋದರಿಯಂತೆ ಬದುಕಬೇಕಾಗುತ್ತದೆ ಎಂದು ಅವಳು ಹೇಳಿದ್ದಾಳೆ. ಇದಕ್ಕೆ ಭಯಭೀತನಾದ ವರ ಆಕೆಯನ್ನು ಆ ಕೂಡಲೇ ಅವಳ ಮನೆಗೆ ಕರೆದೊಯ್ದೊದಿದ್ದಾನೆ ಎಂದು ತಿಳಿದು ಬಂದಿದೆ.
ಸಾಗರ್ನ ಬಡಾ ಬಜಾರ್ ನಿವಾಸಿಯಾದ ವರನು ಲಲಿತಪುರದ ಯುವತಿಯನ್ನು ವಿವಾಹವಾಗಿದ್ದಾನೆ. ವರನ ಕೋರಿಕೆಯ ಮೇರೆಗೆ, ವಧುವಿನ ಕುಟುಂಬವು ಸಮಾರಂಭದಲ್ಲಿ ಭಾಗವಹಿಸಲು ಸಂಬಂಧಿಕರೊಂದಿಗೆ ಸಾಗರ್ಗೆ ಪ್ರಯಾಣ ಬೆಳೆಸಿತು. ಮದುವೆಯಾದ ಕೆಲವೇ ಕ್ಷಣಗಳ ಬಳಿಕ ವಧು ನಗೆ ಈ ಮದುವೆ ಇಷ್ಟವಿರಲಿಲ್ಲ. ನನ್ನ ಕುಟುಂಬದ ಒತ್ತಡದಿಂದಾಗಿ ನಾನು ಬಂದಿದ್ದೇನೆ. ನಾನು ಹಾರ ಧರಿಸಿ ಮದುವೆಯ ಪ್ರತಿಜ್ಞೆ ಮಾಡಿದ್ದೇನೆ, ಆದರೆ ನೀವು ನನ್ನನ್ನು ಮನೆಗೆ ಕರೆದುಕೊಂಡು ಹೋದರೆ, ನಾನು ನಿಮ್ಮ ಹೆಂಡತಿಯಾಗುವುದಿಲ್ಲ – ನಾನು ನಿಮಗೆ ಸಹೋದರಿಯಂತೆ ಬದುಕುತ್ತೇನೆ ಎಂದು ಹೇಳಿ ಶಾಕ್ ನೀಡಿದ್ದಾಳೆ.
ಅವಳ ಮಾತಿನಿಂದ ದಿಗ್ಭ್ರಮೆಗೊಂಡ ವರನು ತಕ್ಷಣವೇ ಕಾರನ್ನು ತಿರುಗಿಸಿ ವಧುವಿನ ಕುಟುಂಬದವರಿದ್ದಲ್ಲಿ ಕರೆದುಕೊಂಡು ಹೋಗಿದ್ದಾನೆ. ವಧುವಿನ ಕುಟುಂಬ ಇನ್ನೂ ಅಲ್ಲೇ ಇತ್ತು, ಮತ್ತು ವರನು ಅವರಿಗೆ ಎಲ್ಲವನ್ನೂ ಹೇಳಿದನು. ಎರಡೂ ಕುಟುಂಬಗಳ ನಡುವೆ ಗಂಭೀರವಾದ ಚರ್ಚೆಯ ನಂತರ, ಅವರು ಪರಸ್ಪರ ಒಪ್ಪಿಗೆಯೊಂದಿಗೆ ಮದುವೆಯನ್ನು ಕೊನೆಗೊಳಿಸಲು ನಿರ್ಧರಿಸಿದರು.
ಯುವತಿಯ ಈ ನಿರ್ಧಾರದಿಂದಾಗಿ ಆಕೆಯ ಮನೆಯವರು ವರನ ಕುಟುಂಬಸ್ಥರಲ್ಲಿ ಕ್ಷಮೆಯಾಚಿಸಿದ್ದಾರೆ. ಮೂಲಗಳು ಹೇಳುವಂತೆ ವಧು ಬೇರೊಬ್ಬರನ್ನು ಪ್ರೀತಿಸುತ್ತಿದ್ದಳು ಎನ್ನಲಾಗಿದೆ. ಹಾಗಾಗಿ ಆಕೆ ಈ ರೀತಿ ಮಾಡಿದ್ದಾಳೆ ಎನ್ನಲಾಗಿದೆ.