ಬೆಂಗಳೂರು: ಶೀಘ್ರದಲ್ಲೇ ಸಿದ್ದರಾಮಯ್ಯ ನೇತೃತ್ವದ ಸಂಪುಟ ಪುನರಚನೆಯಾಗಲಿದೆ ಎಂಬ ಸುದ್ದಿಯ ಬೆನ್ನಲ್ಲೇ 31 ಸಚವರ ಕಾರ್ಯವೈಖರಿ ವರದಿಯನ್ನ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸಲ್ಲಿಸಿದ್ದಾರೆ.
ರಾಜ್ಯದ 31 ಸಚಿವರು ತಮ್ಮ ಖಾತೆಗಳ ನಿರ್ವಹಣೆಯಲ್ಲಿ ಮಾಡಿರುವ ಕೆಲಸ ಹಾಗೂ ಪಕ್ಷ ಸಂಘಟನೆಗೆ ಅವರ ಕೊಡುಗೆ ಕುರಿತ ವರದಿಯನ್ನು ಎಐಸಿಸಿ ಸೂಚನೆ ಮೇರೆಗೆ ಸುರ್ಜೆವಾಲ ಅವರಿಗೆ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸಲ್ಲಿಸಿದ್ರು. ಮುಚ್ಚಿದ ಲಕೋಟೆಯಲ್ಲಿ ಸಚಿವರ ಕಾರ್ಯವೈಖರಿ ಬಗ್ಗೆ ವರದಿ ಸಲ್ಲಿಸಿದ್ದಾರೆ, ಈ ಅವಧಿಯಲ್ಲಿ ಅಂದ್ರೆ 20 ತಿಂಗಳ ಕಾರ್ಯವೈಖರಿಯ ಬಗ್ಗೆ ವರದಿ ಸಲ್ಲಿಕೆಯಾಗಿದೆ. ವರದಿ ಸಲ್ಲಿಕೆ ಬೆನ್ನಲ್ಲೇ ಕೆಲ ಸಚಿವರಲ್ಲಿ ಢವ ಢವ ಶುರುವಾಗಿದೆ.
ಸಂಕ್ರಾಂತಿ ಬಳಿಕ ಅಥವಾ ಬಜೆಟ್ ನಂತರ ಸಂಪುಟ ಪುನರಚನೆಯಾಗಲಿದೆ ಎಂಬ ಚರ್ಚೆಯ ನಡುವೆ ಎಐಸಿಸಿಗೆ ಸಚಿವರ ರಿಪೋರ್ಟ್ ಕಾರ್ಡ್ ಸಹ ತಲುಪುತ್ತಿರುವುದರಿಂದ ಯಾವ ಸಚಿವರನ್ನ ಸಂಪುಟದಿಂದ ಕೈ ಬಿಡಬಹುದು ಎಂದೆಲ್ಲ ಚರ್ಚೆ ನಡೆಯುತ್ತಿದೆ. ತಮಗೆ ಕೊಟ್ಟಿರುವ ಇಲಾಖೆಯಲ್ಲಿನ ಕಾರ್ಯವೈಖರಿ ಮತ್ತು ಪಕ್ಷದ ಸಂಘಟನೆಗೆ ಸಚಿವರ ಒತ್ತು ಇದ್ರ ಜೊತೆಗೆ ಆರೋಪ ರಹಿತ ಮತ್ತು ಭ್ರಷ್ಟಾಚಾರವಿಲ್ಲದವರು ಸಂಪುಟದಲ್ಲಿ ಸೇಫ್ ಆಗ್ತಾರೆ ಇಲಾಖೆಯನ್ನ ಸರಿಯಾಗಿ ನಿರ್ವಹಣೆ ಮಾಡದವರು ಮತ್ತು ಭ್ರಷ್ಟಾಚಾರ ಆರೋಪ ಸೇರಿದಂತೆ ಕೆಲ ಆರೋಪ ಹೊತ್ತ ಸಚಿವರಿಗೆ ಗೇಟ್ ಪಾಸ್ ಖಚಿತ ಎನ್ನಲಾಗಿದೆ. ಹೀಗಾಗಿಯೇ ಸಚವರ ಕಾರ್ಯವೈಖರಿ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ಎಐಸಿಸಿಗೆ ವರದಿ ಸಲ್ಲಿಕೆಯಾಗಿದೆ. ಹಾಗಿದ್ರೆ ಶೀಘ್ರದಲ್ಲೇ ಸಂಪುಟ ಪುನರಚನೆಯಾಗಲಿದ್ಯಾ ಆರೋಪ ಹೊತ್ತಾ ಸಚಿವರಿಗೆ ಗೇಟ್ ಪಾಸ್ ಖಚಿತನಾ ಕಾದುನೋಡಬೇಕಿದೆ.