ಚಿತ್ರದುರ್ಗ: ಬೆಂಗಳೂರಿನ ಮದ್ರಾಸ್ ಇಂಜಿನಿಯರ್ ಗ್ರೂಪ್ ಮತ್ತು ಸೆಂಟರ್‍ನಲ್ಲಿ ಮುಂಬರುವ ಅಕ್ಟೋಬರ್ 6 ರಂದು ಮಾಜಿ ಸೈನಿಕರ ಮಕ್ಕಳು ಹಾಗೂ ಅವಲಂಬಿತರಿಗಾಗಿ ಅಗ್ನಿವೀರ್ ನೇಮಕಾತಿ ನಡೆಯಲಿದೆ. ನೇಮಕಾತಿಯು ಅಗ್ನಿಪಥ್ ಯೋಜನೆಯ ಭಾಗವಾಗಿದೆ.
ಅಗ್ನಿವೀರ್ ಜನರಲ್ ಡ್ಯೂಟಿ, ಟೆಕ್ನಿಕಲ್, ಟ್ರೇಡ್ಸ್‍ಮನ್ ಮತ್ತು ಸ್ಪೋರ್ಟ್ ಮೆನ್ ಆಯ್ಕೆಗೆ ನೇಮಕಾತಿ ನಡೆಯಲಿದೆ. 01 ಅಕ್ಟೋಬರ್ 2004 ರಿಂದ 01 ಏಪ್ರಿಲ್ 2008 ವರಗೆ ಜನಿಸಿದ ಹದಿನೇಳುವರೆ ವರ್ಷದಿಂದ ಇಪ್ಪತ್ತೊಂದು ವರ್ಷದೊಳಗಿನವರು ನೇಮಕಾತಿಯಲ್ಲಿ ಭಾಗವಹಿಸಬಹುದು. ಹೆಚ್ಚಿನ ಮಾಹಿತಿಗಾಗಿ ಮದ್ರಾಸ್ ಇಂಜಿಯರ್ ಗ್ರೂಪ್ ಮತ್ತು ಸೆಂಟರ್ ಸಂಪರ್ಕಿಸಬಹುದು ಎಂದು ಶಿವಮೊಗ್ಗದ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.