ಬೆಂಗಳೂರು: ಪೊಲೀಸರಿಗೆ ಯಾಮಾರಿಸಿ ತಲೆಮರೆಸಿಕೊಂಡಿದ್ದ ಆರೋಪಿ ಜೈಲಿನ ಎಐ ಕ್ಯಾಮರದಿಂದ ಲಾಕ್ ಆಗಿದ್ದಾನೆ. ಕೊಲೆ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಸೇರಿದ್ದ ಅಣ್ಣನ ನೋಡಲು ಹೋಗಿ ತಮ್ಮ ಪೊಲೀಸ್ರ ಕೈಗೆ ಲಾಕ್ ಆಗಿದ್ದಾನೆ. 10 ವರ್ಷದ ಹಿಂದೆ ಡಕಾಯಿತಿ ಕೇಸ್ ನಲ್ಲಿ ಜೈಲು ಸೇರಿ ಬೇಲ್ ಪಡೆದಿದ್ದ ಅಫ್ರೋಜ್ ಪಾಷ ಕೇಸ್ ಟ್ರಯಲ್ ವೇಳೆ ಕೋರ್ಟ್ ಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ. ಅಫ್ರೋಜ್ ಪಾಷ ಬಂಧನಕ್ಕೆ ಹಲವು ಬಾರಿ ಕೋರ್ಟ್ ನಿಂದ ವಾರೆಂಟ್ ಇಶ್ಯೂ ಆಗಿದ್ರು ಅಫ್ರೋಜ್ ಸಿಕ್ಕಿರ್ಲಿಲ್ಲ. ಮಡಿವಾಳ ಪೊಲೀಸರು ಅಫ್ರೋಜ್ ಪಾಷಗಾಗಿ ಹುಡುಕಿ ಹುಡಕಿ ಸುಸ್ತಾಗಿದ್ರು. ಆದರೆ ತಾನಗಿಯೇ ಅಣ್ಣನ ನೋಡಲು ಜೈಲಿಗೆ ಬಂದ ಅಫ್ರೋಜ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪರಪ್ಪನ ಅಗ್ರಹಾರದಲ್ಲಿ ಫೇಸ್ ರೆಕಗ್ನಿಷನ್ ಕ್ಯಾಮೆರಾ ಅಳವಡಿಸಲಾಗಿದ್ದು, ಈ ಬಗ್ಗೆ ಅರಿವಿಲ್ಲದೆ ಪಾಷ ಜೈಲಿಗೆ ಎಂಟ್ರಿಗೆ ಕೊಟ್ಟಿದ್ದಾನೆ. ಜೈಲಿನ ಎಂಟ್ರಿಯಲ್ಲಿ ಒಳ ಹೋಗುವರರ ಮುಖ ಸ್ಕ್ಯಾನ್ ಮಾಡಲಾಗುತ್ತೆ, ಫೇಸ್ ರೆಕಗ್ನಿಷನ್ ಎಐ ಕ್ಯಾಮೆರಾದ ಮೂಲಕ ಬಂದಿದ್ದ ವ್ಯಕ್ತಿಯ ಹಿನ್ನೆಲೆ ತಿಳಿಯುತ್ತೆ. ಅರೆಸ್ಟ್ ವಾರೆಂಟ್ ಇದ್ಯಾ, ಅಥಾವ ಮಿಸ್ಸಿಂಗ್ ಕೇಸ್ ದಾಖಲಾಗಿದ್ಯಾ ಅಂತ ಮಾಹಿತಿ ನೀಡುತ್ತೆ. ಹೀಗೆ ಅಣ್ಣನ ನೋಡಲು ಹೋಗಿದ್ದ ಅಫ್ರೋಜ್ ಪಾಷಾ ಮುಖ ಎಐ ಕ್ಯಾಮರದಲ್ಲಿ ಸ್ಕ್ಯಾನ್ ಆಗಿದೆ. ಸ್ಕ್ಯಾನ್ ಆಗ್ತಿದ್ದಂತೆ ಆತನ ಮೇಲೆ ಅರೆಸ್ಟ್ ವಾರೆಂಟ್ ಇರುವ ವಿಚಾರ ಗೊತ್ತಾಗಿದೆ. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯುರಿಟಿ ಫೋರ್ಸ್ (ಸಿಐಎಸ್ ಎಫ್) ಪೊಲೀಸರಿಂದ ಮಡಿವಾಳ ಪೊಲೀಸರಿಗೆ ಮಾಹಿತಿ ರವಾನೆಯಾಗಿದ್ದು, ಜೈಲಿಗೆ ತೆರಳಿ ಮಡಿವಾಳ ಪೊಲೀಸರಿಂದ ಆರೋಪಿ ಅಫ್ರೋಜ್ ಪಾಷ ಬಂಧಿಸಿದ್ದಾರೆ.
