ಇತ್ತೀಚಿನ ದಿನಗಳಲ್ಲಿ AI ತಂತ್ರಜ್ಞಾನ ಬಹಳ ಮುಂದುವಡೆದಿದೆ. ಇದೀಗ ಕೃಷಿ ಕ್ಷೇತ್ರದಲ್ಲೂ ಎಐ ಅಬ್ಬರ ಶುರುವಾಗಿದೆ.
ಅನೇಕ ರೈತರ ತೋಟಗಳಿಗೆ ಸ್ವಯಂಚಾಲಿತ ಹವಾಮಾನ ಮುನ್ಸೂಚನಾ ಘಟಕ ಕಾಲಿಟ್ಟಿದೆ.
ಇದು ರೈತರಿಗೆ ಪ್ರತಿದಿನದ ವಾತಾವರಣದಲ್ಲಿನ ತೇವಾಂಶ, ಉಷ್ಣಾಂಶ, ಗಾಳಿಯ ಆದ್ರತೆ, ಮಣ್ಣಿನ ತೇವಾಂಶ ಹಾಗೂ ಉಷ್ಣತೆಯಂತಹ
ಮಾಹಿತಿಯನ್ನು ಈ ಘಟಕ ನಿಖರವಾಗಿ ಒದಗಿಸುತ್ತದೆ.
ಆಪ್ ಮೂಲಕ ಯಂತ್ರವನ್ನು ರೈತರ ಮೊಬೈಲ್‌ನೊಂದಿಗೆ ಜೋಡಿಸಲಾಗುತ್ತದೆ. ಇದರಿಂದ ರೈತನ ಮೊಬೈಲ್‌ಗೆ ಮೆಸೇಜ್ ಮೂಲಕ ರವಾನೆಯಾಗುತ್ತದೆ.