ಜಮ್ಮು ಮತ್ತು ಕಾಶ್ಮೀರ : ಭಾರತದ ಅತ್ಯಂತ ಕಠಿಣ ಪರೀಕ್ಷೆಗಳಲ್ಲಿ ಒಂದಾದ ಯುಪಿಎಸ್‌ಸಿ ಪರೀಕ್ಷೆಗೆ ಪ್ರತಿ ವರ್ಷ ಲಕ್ಷಾಂತರ ಆಕಾಂಕ್ಷಿಗಳು ಸ್ಪರ್ಧಿಸುತ್ತಾರೆ. ಈ ಪ್ರತಿಷ್ಠಿತ ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದವರಲ್ಲಿ ಅಂಬಿಕಾ ರೈನಾ ಕೂಡ ಒಬ್ಬರು.
ಜಮ್ಮು ಮತ್ತು ಕಾಶ್ಮೀರದ ಶ್ರೀನಗರದ ನಿವಾಸಿಯಾದ ಅಂಬಿಕಾ, ಮೇಜರ್ ಜನರಲ್ ಅವರ ಮಗಳು. ತಂದೆಯವರ ವರ್ಗಾವಣೆ ಕಾರಣದಿಂದಾಗಿ ವಿವಿಧ ನಗರಗಳಲ್ಲಿ ವಾಸಿಸುತ್ತಿದ್ದ ಅವರು ಬಾಲ್ಯದಿಂದಲೂ ಉತ್ತಮ ವಿದ್ಯಾರ್ಥಿನಿಯಾಗಿದ್ದರು. ವರು ಅಹಮದಾಬಾದ್‌ನ ಸಿಇಪಿಟಿ ವಿಶ್ವವಿದ್ಯಾನಿಲಯದಿಂದ ವಾಸ್ತುಶಿಲ್ಪದಲ್ಲಿ ಪದವಿ ಪಡೆದರು.
ಪದವೀಧರರಾದ ನಂತರ, ಅಂಬಿಕಾ ಸ್ವಿಟ್ಜರ್ಲೆಂಡ್‌ಗೆ ಇಂಟರ್ನ್‌ಶಿಪ್‌ಗೆ ತೆರಳಿದರು. ಅಲ್ಲಿ ಅವರಿಗೆ ಪ್ರಮುಖ ಕಂಪನಿಗಳಿಂದ ಹಲವು ಉದ್ಯೋಗದ ಆಫರ್‌ಗಳು ಬಂದವು. ವಿದೇಶದಲ್ಲಿನ ಆಕರ್ಷಕ ಅವಕಾಶಗಳಿದ್ದರೂ, ಅವರು ಸಿವಿಲ್ ಸೇವೆಗಳ ಕಡೆಗೆ ಆಸಕ್ತಿಯನ್ನು ಹೊಂದಿದ್ದ ಅವರು ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಲು ಭಾರತಕ್ಕೆ ಮರಳಲು ನಿರ್ಧರಿಸಿದರು.
ಅಂಬಿಕಾ ತಮ್ಮ ಮೊದಲ ಎರಡು ಪ್ರಯತ್ನಗಳಲ್ಲಿ ವಿಫಲರಾದರು. ಆದರೆ ಈ ಪ್ರಯತ್ನಗಳನ್ನು ಕಲಿಕೆಯ ಅನುಭವಗಳಾಗಿ ಬಳಸಿಕೊಂಡ ಅವರು, ತಮ್ಮ ದೌರ್ಬಲ್ಯಗಳನ್ನು ಗುರುತಿಸಿ, ತಮ್ಮ ಅಭ್ಯಾಸದ ಮೇಲೆ ಗಮನಹರಿಸಿ ಸುಧಾರಿಸಿಕೊಂಡರು.
2022 ರಲ್ಲಿ ಮೂರನೇ ಬಾರಿ ಯುಪಿಎಸ್‌ಸಿ ಪರೀಕ್ಷೆ ಬರೆದ ಅವರು, 164 ನೇ ರ‍್ಯಾಂಕ್ ಗಳಿಸುತ್ತಾರೆ. ಪ್ರಸ್ತುತ ಅವರು ಭಾರತೀಯ ಆಡಿಟ್ ಮತ್ತು ಲೆಕ್ಕಾ ಪರಿಶೋಧನಾ ಸೇವೆ (ಐಎಎಸ್) ನ ಅಧಿಕಾರಿಯಾಗಿದ್ದಾರೆ.