ಧರ್ಮಸ್ಥಳ ಕೇಸ್ ಗೆ ಸಂಬಂಧಿಸಿದಂತೆ ಅನಾಮಿಕ ವ್ಯಕ್ತಿಯನ್ನು ಮೊದಲು ಬಂಧಿಸಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ಧರ್ಮಸ್ಥಳದ ಹೆಸರು ಹಾಗೂ ಹೆಗ್ಗಡೆಯವರ ಹೆಸರು ಹಾಳು ಮಾಡುವ ಷಡ್ಯಂತ್ರ ನಡೆಯುತ್ತಿದೆ.
ಸರ್ಕಾರ ಈ ಕೂಡಲೇ ಅನಾಮಿಕ ವ್ಯಕ್ತಿಯನ್ನು ಬಂಧಿಸಬೇಕು .ಅನಾಮಿಕ ದೂರುದಾರನ ಪ್ರಕಾರ ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತುಹಾಕಲಾಗಿದೆ ಎಂದು ಹೇಳುತ್ತಿದ್ದಾರೆ.ಆದರೆ ಇಂತಹ ಹೇಳಿಕೆಗಳಿಗೆ ಯಾವುದೇ ಆಧಾರವಿಲ್ಲ. ಒಬ್ಬ ವ್ಯಕ್ತಿ ನೂರಾರು ಹೆಣಗಳನ್ನು ಹೂಳಲು ಸಾಧ್ಯವೇ..ಇದರ ಹಿಂದೆ ದೊಡ್ಡ ಷಡ್ಯಂತ್ರವಿದೆ.ಸರ್ಕಾರ ಕೂಡಲೇ ಅನಾಮಿಕ ವ್ಯಕ್ತಿಯನ್ನು ಬಂಧಿಸಿ , ಆತನ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಆಗ್ರಹಿಸಿದ್ದಾರೆ.ಈಶ್ವರಪ್ಪ ಹೇಳಿಕೆಗೆ ನಟ ಚೇತನ್ ಅಹಿಂಸಾ ಕಿಡಿ“ಈಶ್ವರಪ್ಪ ಹೇಳಿದ್ದಾರೆ: ‘ಅನಾಮಿಕ ವ್ಯಕ್ತಿಯನ್ನು ಮೊದಲು ಬಂಧಿಸಬೇಕು’ಈಶ್ವರಪ್ಪ ಇಂದು ಕರ್ನಾಟಕ ರಾಜಕೀಯದಲ್ಲಿ ಏನು ತಪ್ಪು ನಡೆಯುತ್ತಿದೆ ಎಂಬುದರ ಪ್ರತಿಬಿಂಬ. ರಾಜಕಾರಣದ ವ್ಯಕ್ತಿಯ ಕೊಡುಗೆಗಳು ಬಹುತೇಕ ಶೂನ್ಯ, ಆದರೆ ಭಾಷೆ ಮಾತ್ರ ಪ್ರಶ್ನಾರ್ಹ ಈಶ್ವರಪ್ಪ ಅವರೇ, ನೀವು ಹಿಂದೆ ಮಾಡಿದ ದ್ವೇಷ ಭಾಷಣಗಳಿಗಾಗಿ ಬಂಧಿತರಾಗಬೇಕಾಗಿಲ್ಲವಾ? ಇದು ಎಷ್ಟು ವಿಪರ್ಯಾಸ” ! ಎಂದು ಚೇತನ್ ಅಹಿಂಸಾ ಕಿಡಿಕಾರಿದ್ದಾರೆ.